ಕಾಸರಗೋಡು: ಭಾರತೀಯ ರಾಜ್ಯ ಪಿಂಚಣಿದಾರರ ಮಹಾಸಂಘ್(ಬಿಆರ್‍ಪಿಎಂಎಸ್)ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಕುಟುಂಬ ಸಂಗಮ ಕಾಸರಗೋಡು ತೈರೆ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಸಭಾಂಗಣದಲ್ಲಿ ಜರುಗಿತು.
ಕೇರಳ ಸರ್ಕಾರದ ನಿವೃತ್ತ ಕಾರ್ಯದರ್ಶಿ ಗೋಪಾಲ ಕೃಷ್ಣ ಭಟ್ ಐ.ಎ.ಎಸ್ ಸಮಾರಂಭ ಉದ್ಘಾಟಿಸಿದರು. ಸಂಘಟನೆ ಜಿಲ್ಲಾಧ್ಯಕ್ಷ ಬಾಲಕೃಷ್ಣ ಮಲ್ಲಿಗೆಮಾಡು ಹಿರಿಯ ಆರೆಸ್ಸೆಸ್ ಪ್ರಚಾರಕ ಎ. ಸಿ. ಗೋಪಿನಾಥ್ ಮುಖ್ಯ ಭಾಷಣ ಮಾಡಿದರು. ಸಂಘದ ದೇಶೀಯ ಉಪಾಧ್ಯಕ್ಷ ನಿವೃತ್ತ ಸಿ. ಐ. ಬಾಲಕೃಷ್ಣ ಕೆ ಉಪಸ್ಥಿತರಿದ್ದರು. ಸಂಘಟನೆ ರಾಷ್ಟ್ರೀಯ ಸಮಿತಿ ಮಾಜಿ ಕೋಶಾಧಿಕಾರಿ ಎನ್. ಜನಾರ್ದನನ್ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಸಿ.ಎಚ್ ಜಯೇಂದ್ರ ವಂದಿಸಿದರು. ಈ ಸಂದರ್ಭ ಕುಟುಂಬ ಸದಸ್ಯರಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ನಡೆಯಿತು.





