ಕಾಸರಗೋಡು: ರೋಟರಿ ಕಾಸರಗೋಡು ಮಿಡ್‍ಟೌನ್‍ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ರೋಟರಿ ಭವನದಲ್ಲಿ ಜರುಗಿತು. ಜಿಲ್ಲಾ ಗವರ್ನರ್ ಡಾ. ಸಂತೋಷ್ ಶ್ರೀಧರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾಸರಗೋಡು ರೋಟರಿ ಅಧ್ಯಕ್ಷ ಡಾ.ಬಿ.ನಾರಾಯಣ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು.
ಹೊಸದಾಗಿ ರಚಿಸಲಾದ ಸಮಿತಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಗಂಗಾಧರನ್ ಪಿ.ವಿ. ಮತ್ತು ಕಾರ್ಯದರ್ಶಿ ಅರ್ಜುನನ್ ತಾಯಲಂಗಡಿ ಅವರು ಪ್ರಮಾಣ ವಚನ ಸ್ವೀಕರಿಸಿದರು. .ಸಮಾರಂಭದಲ್ಲಿ ನಿಕಟಪೂರ್ವ ಜಿಲ್ಲಾ ಗವರ್ನರ್ ಶ್ರೀಧರನ್ ನಂಬಿಯಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವಲಯ ಸಂಯೋಜಕ ಎಂ.ಕೆ.ರಾಧಾಕೃಷ್ಣನ್, ಸಹಾಯಕ ಗವರ್ನರ್ ಹರೀಶ್ ವಿ.ವಿ., ಜಿಜಿಆರ್ ಡಾ.ಜನಾರ್ದನ ನಾಯ್ಕ್, ನಿಹಾಲ್‍ಜೋಯ್, ಡಾ.ಸುಧಾ ಸಂತೋಷ್, ದಿನೇಶ್ ಎಂಟಿ, ವಕೀಲ ಬೆನ್ನಿ ಜೋಸ್, ಕಾಸರಗೋಡು ಮಿಡ್ ಟೌನ್ ಅಧ್ಯಕ್ಷ ಗಂಗಾಧರನ್ ಪಿ.ವಿ, ಕಾರ್ಯದರ್ಶಿ ಅರ್ಜುನನ್ ತಾಯಲಂಗಡಿ, ಕಾರ್ಯದರ್ಶಿ ಹರಿಪ್ರಸಾದ್ ಉಪಸ್ಥಿತರಿದ್ದರು.




