ಕುಂಬಳೆ: ಕುಟುಂಬಶ್ರೀ ಆಯೋಜಿಸಿದ್ದ ಅಲ್ಸ್ ಮರಾ ಹಲಸು ಉತ್ಸವವು ಭಾರೀ ಮಳೆಯ ನಡುವೆಯೂ ನೂರಾರು ಸಂದರ್ಶಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಆಯೋಜಕರು ಆರಂಭದಲ್ಲಿ ಎರಡು ದಿನಗಳ ಕಾಲ ಪ್ರದರ್ಶನ ಮತ್ತು ಮಾರಾಟವನ್ನು ನಡೆಸಲು ಯೋಜಿಸಿದ್ದರು.
ಆದರೆ, ಮೊದಲ ದಿನವೇ ಮಾರಾಟ ಭಾರಿ ಪ್ರಮಾಣದಲ್ಲಿ ನಡೆದ ಕಾರಣ ಎಲ್ಲಾ ಹಲಸಿನ ಉತ್ಪನ್ನಗಳು ಮಾರಾಟವಾಗಿ ಹಬ್ಬ ಮುಕ್ತಾಯಗೊಂಡಿತು. ಈ ಮಧ್ಯೆ, ಅಮೃತಂ ಕರ್ಕಟಕ ಕಂಞÂ್ಞ (ಮೂಲಿಕೆ ಗಂಜಿ) ಉತ್ಸವವು ಜುಲೈ 18 ರಿಂದ 26 ರವರೆಗೆ ನಡೆಯಿತು. ಹಲಸಿನ ಸಿಪ್ಪೆ, ಕಾಂಡ, ತಿರುಳು, ತೊಳೆ, ಬೀಜ ಮತ್ತು ನಾರಿನಿಂದ ತಯಾರಿಸಿದ 100 ಕ್ಕೂ ಹೆಚ್ಚು ಉತ್ಪನ್ನಗಳನ್ನು ಉತ್ಸವದಲ್ಲಿ ಪ್ರದರ್ಶಿಸಲಾಯಿತು.
ಜಿಲ್ಲಾ ಮಿಷನ್ ಸಂಯೋಜಕ ಕೆ. ರತೀಶ್‍ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ, ಉಪ ಜಿಲ್ಲಾಧಿಕಾರಿ ಲಿಪು ಎಸ್. ಲಾರೆನ್ಸ್, ಜಿಲ್ಲಾ ಪಂಚಾಯತಿ ಸದಸ್ಯೆ ಜಾಸ್ಮಿನ್ ಕಬೀರ್ ಚೆರ್ಕಳ, ಸಿಡಿಎಸ್ ಅಧ್ಯಕ್ಷೆ ಆಯಿಷಾ ಇಬ್ರಾಹಿಂ, ಮಮ್ತಾಜ್ ಅಬೂಬಕರ್, ಸುನಿತಾ ಮತ್ತು ಸುಮಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲೆಯ 42 ಸಿಡಿಎಸ್‍ಗಳಿಂದ ಆಯ್ಕೆಯಾದ 72 ಸದಸ್ಯರು ಸ್ಪರ್ಧೆಯಲ್ಲಿ ತಮ್ಮ ಉತ್ಪನ್ನಗಳನ್ನು ಪ್ರಸ್ತುತಪಡಿಸಿದರು. ಬೇಡಗಂ ಕುಟುಂಬಶ್ರೀ ಸಿಡಿಎಸ್ ಹಲಸನ್ನು ಬಳಸಿ ತಯಾರಿಸಿದ 80 ಉತ್ಪನ್ನಗಳನ್ನು ಪ್ರಸ್ತುತಪಡಿಸುವ ಮೂಲಕ ಗಮನ ಸೆಳೆಯಿತು. ಬೇಡಗಂ, ವೆಸ್ಟ್ ಎಳೇರಿ ಮತ್ತು ಕುಂಬಳೆ ಸಿಡಿಎಸ್ ಕ್ರಮವಾಗಿ ಮೊದಲ ಮೂರು ಬಹುಮಾನಗಳನ್ನು ಬಾಚಿಕೊಂಡಿತು.




.jpg)
