ಬದಿಯಡ್ಕ: ಏತಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ ವರ್ಷಾವಧಿ ನಾಗರಪಂಚಮಿ ಆಚರಣೆ ಶ್ರೀ ಸದಾಶಿವ ದೇವಸ್ಥಾನನ ನಾಗನ ಸಾನ್ನಿಧ್ಯದಲ್ಲಿ ಮಂಗಳವಾರ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಸಂಘದ ಅಧ್ಯಕ್ಷ ಬಾಲಕೃಷ್ಣ ಕೆ.ಕೆ. ಕುಂಡಾಪು, ಪೆರ್ಲ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷೆ ಶ್ಯಾಮಲಾ ಪತ್ತಡ್ಕ, ಶ್ರೀಜಠಾಧಾರಿ ಮೂಲಸ್ಥಾನ ಮಲೆತ್ತಡ್ಕ ಇದರ ಅಧ್ಯಕ್ಷ ರಾಧಾಕೃಷ್ಣ ಪತ್ತಡ್ಕ, ಆಡಳಿತ ಮೊಕ್ತೇಸರ ಚಂದ್ರಶೇಖರ ಏತಡ್ಕ ಹಾಗೂ ಡಾ.ಪ್ರಕಾಶ ವೈ.ಎಚ್., ಮೊಕ್ತೇಸರರಾದ ವೈ.ವಿ.ಸುಬ್ರಹ್ಮಣ್ಯ, ಶ್ರೀ ನಾಗರಕ್ತೇಶ್ವರಿ ದೈವಸ್ಥಾನ ಗದ್ದೆಮನೆ ಏತಡ್ಕ ಇದರ ಖಜಾಂಜಿ ಗದ್ದೆಮನೆ ಮುರಳಿಕೃಷ್ಣ ಮಾಣಿತ್ತೋಡಿ ಉಪಸ್ಥಿತರಿದ್ದರು.
ನಾಗರಪಂಚಮಿ ಕೇವಲ ಭಕ್ತಿಯ ಆಚರಣೆ ಮಾತ್ರವಲ್ಲ ಪ್ರಕೃತಿಯೊಂದಿಗೆ ಮಾನವನ ಸಹಬಾಳ್ವೆಯ ನೆನಪು ಮಾಡಿಸುವ ಹಿಂದುಗಳ ಪ್ರಮುಖ ಹಬ್ಬ. ಪರಿಸರ ಸಂಬಂಧಿತವಾದ ಕಾರಣ ಆಸಕ್ತರಿಗೆ ಬಿಲ್ವಪತ್ರೆ ಗಿಡ ವಿತರಣೆ ಮಾಡಲಾಯಿತು. ಆಧ್ಯಾತ್ಮಿಕ ಪೌರಾಣಿಕ ಸಂದೇಶಗಳೂ ಈ ಸಂದರ್ಭದಲ್ಲಿ ಮನಗಾಣಬೇಕಾಗಿದೆ ಎಂದು ಆಡಳಿತ ಮೊಕ್ತೇಸರ ಚಂದ್ರಶೇಖರ ಏತಡ್ಕ ಈ ಸಂದರ್ಭ ನುಡಿದರು. ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ಪಡಿಕ್ಕಲ್ಲು ಅವರು ನಾಗನಿಗೆ ಕ್ಷೀರಾಭಿಷೇಕ ಹಾಗೂ ಪೂಜಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ಸಾಮೂಹಿಕ ಪ್ರಾರ್ಥನೆಗೈದರು.




.jpg)
.jpg)
.jpg)
