ಮುಳ್ಳೇರಿಯ: ಅಗಲ್ಪಾಡಿ ಜನಸೇವಾ ಚಾರಿಟೆಬಲ್ ಅಸೊಸಿಯೇಷನ್, ಬೆಂಗಳೂರು ಆಶ್ರಯದಲ್ಲಿ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಶುಭಾಶೀರ್ವಾದಗಳೊಂದಿಗೆ ಕಾರಡ್ಕ ಗ್ರಾಮದ ಪುಂಡೂರು ಶಾಲೆಯ ಸಮೀಪ 'ಹಿರಿಯರ ಮನೆ' ನಿರ್ಮಾಣ ಕಾರ್ಯದ ಭೂಮಿ ಪೂಜೆಯನ್ನು ನೆರವೇರಿಸಲಾಯಿತು. ಬ್ರಹ್ಮಶ್ರೀ ಅಲಂಗಾರು ರಾಧಾಕೃಷ್ಣ ಭಟ್ ಅವರ ಪೌರೋಹಿತ್ಯದೊಂದಿಗೆ ಭೂಮಿ ಪೂಜೆ ನಡೆಯಿತು.
ಈ ಸಂದರ್ಭ ಬೆಂಗಳೂರಿನ ಎಸ್.ಎ ಚಂದ್ರನ್ ಇದರ ನಿರ್ವಾಹಕ ನಿರ್ದೇಶಕ ರಮೇಶ್, ಜನಸೇವಾ ಚಾರಿಟೆಬಲ್ ಅಸೊಸಿಯೇಷನ್ ಬೆಂಗಳೂರು ಇದರ ಅಧ್ಯಕ್ಷ ನಾಗರಾಜ ಉಪ್ಪಂಗಳ, ಉಪ್ಪಂಗಳ ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ಉದ್ಯಮಿ ರಂಗ ಶರ್ಮಾ ಉಪ್ಪಂಗಳ, ಸ್ಥಳದಾನ ಮಾಡಿಉವ ಇಂದಿರಾ.ಕೆ.ಪಿ, ಶ್ರೀಹರಿ ಭಟ್ ಸಜಂಗದ್ದೆ, ಜನಾರ್ದನ ಭಟ್ ತೈರೆ, ಗೋವಿಂದ ಭಟ್ ಕನ್ನಡಗುಳಿ, ಗೋಪಾಲಕೃಷ್ಣ ಭಟ್ ಕೊಚ್ಚಿ, ವಿಶ್ವೇಶ್ವರ ಭಟ್ ಕೆಲ್ಲಂಕೂಡ್ಲು, ರುಕ್ಮಿಣಿ ಅಮ್ಮ, ಇಂಜಿನಿಯರ್ ಶ್ರೀವತ್ಸ ಕೊಟ್ಟಂಗುಳಿ ಉಪಸ್ಥಿತರಿದ್ದರು.


