ಕಾಸರಗೋಡು: ಹದಿನೈದರ ಹರೆಯದ ಬಾಲಕಿ ಹಾಗೂ ಹತ್ತನೇ ತರಗತಿ ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿರುವ ಬಾಲಕಿಯ ತಂದೆಯನ್ನು ನ್ಯಾಯಾಳಯಕ್ಕೆ ಹಾಜರುಪಡಿಸಲಾಗಿದ್ದು, ಈತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕೊಡಗು ನಿವಾಸಿ ಹಾಗೂ ಕಾಞಂಗಾಡಿನ ಕ್ವಾಟ್ರಸ್‍ನಲ್ಲಿ ವಾಸಿಸುತ್ತಿದ್ದ ಈತ ಪುತ್ರಿ ಗರ್ಭಿಣಿಯಾಗಿರುವ ವಿಷಯ ತಿಳಿಯುತ್ತಿದ್ದಂತೆ ವಿದೇಶಕ್ಕೆ ಪರಾರಿಯಾಗಿದ್ದು, ಪೊಲೀಸರು ಈತನನ್ನು ತಂತ್ರಪೂರ್ವಕವಾಗಿ ಊರಿಗೆ ಕರೆಸಿಕೊಂಡು, ಬಂಧಿಸಿದ್ದಾರೆ. ಬಾಲಕಿಯ ಮಗುವನ್ನು ಸರ್ಕಾರದ ಅಧೀನದಲ್ಲಿರುವ ಶಿಶು ಸಂರಕ್ಷಣಾ ಇಲಾಖೆಗೆ ಹಸ್ತಾಂತರಿಸಲಾಗಿದೆ. ತಂದೆ ಡಿಎನ್‍ಎ ತಪಾಸಣೆ ಜತೆಗೆ ವೈಜ್ಞಾನಿಕ ರೀತಿಯ ತನಿಖೆ ಪೂರ್ಣಗೊಳಿಸಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಪೊಲೀಸರು ಮುಂದಾಗಿದ್ದಾರೆ. ಆಸ್ಪತ್ರೆ ಅಧಿಕಾರಿಗಳು ನೀಡಿದ ಮಾಹಿತಿಯನ್ವಯ ಪೊಲೀಸರು ಪೋಕ್ಸೋ ಅನ್ವಯ ಕೇಸು ದಾಖಲಿಸಿಕೊಂಡಿದ್ದಾರೆ.




