ಕುಂಬಳೆ: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಬಂದ್ಯೋಡು ಸರ್ವೀಸ್ ಸ್ಟೇಶನ್ ಕಟ್ಟಡದಲ್ಲಿ ಅಪರಿಚಿತ ಪುರುಷ ಮೃತದೇಹ ಪತ್ತೆಯಾಗಿದೆ. 50ವರ್ಷ ಪ್ರಾಯ ಅಂದಾಜಿಸಲಾಗಿದ್ದು, ಮೃತದೇಹ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹ ದಫನ ಮಾಡಲಾಗಿದೆ. ಮೃತದೇಹ ಪತ್ತೆಯಾಗಿರುವ ಪ್ರದೇಶದ ಸಿಸಿ ಕ್ಯಾಮರಾ ದೃಶ್ಯಾಳಿ ತಪಾಸಣೆ ನಡೆಸಿದಾಗ ಈ ಹಾದಿಯಾಗಿ ವ್ಯಕ್ತಿಯೊಬ್ಬ ನಡೆದುಹೋಗುತ್ತಿರುವುದು ಪತ್ತೆಯಾಗಿದ್ದು, ಈ ವ್ಯಕ್ತಿಯ ಫೋಟೋ ಕುಂಬಳೆ ಠಾಣೆಯಲ್ಲಿರಿಸಲಾಗಿದ್ದು, ವ್ಯಕ್ತಿಯ ಬಗ್ಗೆ ಮಾಹಿತಿಯಿರುವವರು ಠಾಣೆಗೆ ತೆರಳಿ ವಿಚಾರಿಸುವಂತೆ ಪೊಲೀಸರು ತಿಳಿಸಿದ್ದಾರೆ.





