ಕಾರಗೋಡು: ಜಿಲ್ಲೆಯಲ್ಲಿ ಬಿರುಸಿನ ಗಾಳಿಯಿಂದ ಕೂಡಿದ ಮಳೆಯಾಗುತ್ತಿದ್ದು, ವಿವಿಧೆಡೆ ಹಾನಿ ಸಂಭವಿಸಿದೆ. ಜಿಲ್ಲೆಯ ನಾನಾ ಕಡೆ ಮರಗಳು ಬುಡಸಹಿತ ಕಳಚಿಬಿದ್ದಿರುವುದಲ್ಲದೆ, ವಿದ್ಯುತ್ ಕಂಬಗಳೂ ಧರಾಶಾಯಿಯಾಗಿದೆ. ಇದರಿಂದ ಜಿಲ್ಲಾದ್ಯಂತ ವಿದ್ಯುತ್ ಸಂಚಾರ ಅಸ್ತವ್ಯಸ್ತಗೊಂಡಿದೆ. ವಾಯುಭಾರ ಕುಸಿತದ ಪರಿಣಾಮ ಗುಜರಾತ್ ಕರಾವಳಿಯಿಂದ ಆರಂಭಿಸಿ ಕೇರಳದ ವರೆಗೂ ಕರಾವಳಿಯಾದ್ಯಂತ ಗಾಳಿಯಿಂದ ಕೂಡಿದ ಮಳೆಯಾಗಲು ಕಾರಣವಾಗುತ್ತಿದೆ.
ಬಿರುಸಿನ ಮಳೆಗೆ ಅಡೂರು ಪೇಟೆಯಿಂದ ಕಾಟಿಕ್ಕಜೆ ತೆರಳುವ ರಸ್ತೆ ಮಧ್ಯೆ ಕೋರಿಕಂಡ ಎಂಬಲ್ಲಿ ಗುಡ್ಡ ಕುಸಿದುಬಿದ್ದಿದ್ದು, ರಾಶಿ ಬಿದ್ದಿರುವ ಮಣ್ಣು ತೆರವುಗೊಳಿಸುವ ಕಾರ್ಯ ಮುಂದುವರಿದಿದೆ. ಜಿಲ್ಲೆಯಲ್ಲಿ ಜು. 29ರ ವರೆಗೂ ಬಿರುಸಿನ ಮಳೆಯಾಗುವ ಸಾಧ್ಯತೆಯಿದ್ದು, ಕೇಂದ್ರ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಚಿತ್ರ: ಅಡೂರು ಕೋರಿಕಂಡ ಎಂಬಲ್ಲಿ ಗುಡ್ಡ ಕುಸಿದುಬಿದ್ದಿದ್ದು ಭಾರಿ ಪ್ರಮಾಣದಲ್ಲಿ ಮಣ್ಣು ರಸ್ತೆಗೆ ಸೇರಿದೆ.





