ಕಾಸರಗೋಡು: ಸರ್ಕಾರಿ ನೌಕರರ ಹಿತಾಸಕ್ತಿ ಕಾಪಾಡಿಕೊಂಡುಬರುವಲ್ಲಿ ಮಾಜಿ ಮುಖ್ಯಮಂತ್ರಿ ದಿ. ಊಮನ್‍ಚಾಂಡಿ ಅವರ ಸೇವೆ ಸ್ತುತ್ಯರ್ಹವಾದುದು ಎಂದು ಕೇರಳ ಎನ್.ಜಿ.ಓ ಅಸೋಸಿಯೇಶನ್ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷ ಎ.ಟಿ ಶಶಿ ತಿಳಿಸಿದ್ದಾರೆ. ಅವರು ಸಂಘಟನೆ ಜಿಲ್ಲಾ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಮಾಜಿ ಮುಖ್ಯಮಂತ್ರಿ ಊಮನ್‍ಚಾಂಡಿ ಅವರ ಪ್ರಥಮ ಸಂಸ್ಮರಣಾ ದಿನಾಚರಣೆ ಸಂದರ್ಭ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಿ ಮಾತನಾಡಿದರು.
ರಾಜ್ಯ ಸಮಿತಿ ಸದಸ್ಯ ಕೆ ಜಿ ರಾಧಾಕೃಷ್ಣನ್, ಜಿಲ್ಲಾ ಕೋಶಾಧಿಕಾರಿ ವಿ ಎಂ ರಾಜೇಶ್, ಜಿಲ್ಲಾ ಉಪಾಧ್ಯಕ್ಷ ಎಂ ಮಾಧವನ್ ನಂಬಿಯಾರ್ ಪುಷ್ಪಾರ್ಚನೆ ನಡೆಸಿದರು. ಮಹಿಳಾ ಕೋಶದ ಜಿಲ್ಲಾ ಸಹ ಸಂಚಾಲಕಿ ರತಿ ವಯಲಾಪ್ರಂ, ಶಿಜಿಲ್ ಪಿಣರಾಯಿ, ಕೆ ಶ್ರೀಲೇಶ್, ಪಪ್ಪನ್ ಕುಲಿಯನ್ ಮರಮ್, ರಾಘವನ್ ಅಡ್ಕ, ಟಿ. ಕುಞÂಕಣ್ಣನ್, ಜಗದೀಶನ ಕಾಡಗಂ, ವಿನಯ್ ತೈಕ್ಕಡಪ್ಪುರಂ, ಸಜಿ ಮೊದಲಾದವರು ಉಪಸ್ಥಿತರಿದ್ದರು.


