ಮಂಜೇಶ್ವರ: ರಂಗಮಂಡಲ ಬೆಂಗಳೂರು ಹಾಗೂ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ, ಗಿಳಿವಿಂಡು ಮಂಜೇಶ್ವರ ಇದರ ಜಂಟಿ ಆಶ್ರಯದಲ್ಲಿ ಜು.27 ರಂದು ಗಿಳಿವಿಂಡಲ್ಲಿ ಆಯೋಜಿಸಲಾದ ಕಾವ್ಯ ಸಂಸ್ಕøತಿ ಯಾನ ಕಾರ್ಯಕ್ರಮದ ಸ್ವಾಗತ ಸಮಿತಿ ಸಭೆ ಇಂದು(ಜು.8) ಸಂಜೆ 4ಕ್ಕೆ ಗಿಳಿವಿಂಡು ಸಭಾಂಗಣದಲ್ಲಿ ನಡೆಯಲಿದೆ. ಪ್ರಧಾನ ರಂಗಮಂಡಲದ ಸಂಚಾಲಕ ಡಿ.ಬಿ.ಮಲ್ಲಿಕಾರ್ಜುನ ಸ್ವಾಮಿ ಮಹಾಮನೆ, ಗಿಳಿವಿಂಡು ಕಾರ್ಯದರ್ಶಿ ಉಮೇಶ್ ಎಂ.ಸಾಲಿಯಾನ್, ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ರಂಗಭೂಮಿ, ಚಲಚಿತ್ರ ನಿರ್ದೇಶಕಿ ನಿರ್ಮಲಾ ನಾದನ್ ಮೊದಲಾದವರು ಉಪಸ್ಥಿತರಿದ್ದು ಮಾರ್ಗದರ್ಶನ ನೀಡಲಿರುವರು. ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತರು ಪಾಲ್ಗೊಳ್ಳಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





