ಕಾಸರಗೋಡು: ವನ್ಯಜೀವಿ ಉಪಟಳ ತಡೆಗಟ್ಟುವ ನಿಟ್ಟಿನಲ್ಲಿ ಸಮಾಲೋಚಿಸಲು ಅರಣ್ಯ ಗಡಿಗಳನ್ನು ಹಂಚಿಕೊಳ್ಳುವ ಪಂಚಾಯಿತಿ ಕಾರ್ಯದರ್ಶಿಗಳು ಮತ್ತು ಅಧ್ಯಕ್ಷರ ಸಭೆಯನ್ನು ಜುಲೈ 21 ರಂದು ಬೆಳಿಗ್ಗೆ 11ಕ್ಕೆ ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಆಯೋಜಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ, ಅರಣ್ಯ ಮತ್ತು ವನ್ಯಜೀವಿ ಅಧಿಕಾರಿಸಚಿವ ಎ.ಕೆ. ಶಶೀಂದ್ರನ್ ತಿಳಿಸಿದ್ದಾರೆ.
ಅವರು ಶುಕ್ರವಾರ ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮಾನವ ವನ್ಯಜೀವಿ ಸಂಘರ್ಷ ತಗ್ಗಿಸುವಿಕೆಗಾಗಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ನಿಯಂತ್ರಣ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಮಾನವ-ವನ್ಯಜೀವಿ ಸಂಘರ್ಷವನ್ನು ತಗ್ಗಿಸಲು ಕೈಗೊಂಡಿರುವ ಚಟುವಟಿಕೆಗಳನ್ನು ಸಚಿವರು ಪರಿಶೀಲಿಸಿದರು. ಕರ್ನಾಟಕದ ಅರಣ್ಯಗಳೊಂದಿಗೆ ನೇರ ಗಡಿ ಹಂಚಿಕೊಂಡಿರುವ ಪ್ರದೇಶಗಳಲ್ಲಿ ಮಾನವ-ವನ್ಯಜೀವಿ ಸಂಘರ್ಷ ಸಾಮಾನ್ಯವಾಗುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟನಲ್ಲಿ ಸಮಾಲೋಚಿಸಲು ಸಭೆ ಆಯೋಜಿಸಲಾಗುತ್ತಿದೆ. ಜಿಲ್ಲಾಧಿಕಾರಿ, ಜಿಲ್ಲಾ ಪೆÇಲೀಸ್ ಮುಖ್ಯಸ್ಥರು ಹಾಗೂ ವಿಭಾಗೀಯ ಅರಣ್ಯ ಅಧಿಕಾರಿ ಸಮಿತಿ ಸಂಚಾಲಕರಾಗಿರುವರು. ಜಿಲ್ಲಾ ವೈದ್ಯಾಧಿಕಾರಿ, ಸ್ಥಳೀಯಾಡಳಿತ ಸಂಸ್ಥೆ ಉಪನಿರ್ದೇಶಕರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಇಲಾಖೆ ಅಧಿಕಾರಿಗಳು, ಜಿಲ್ಲಾ ಕೃಷಿ ಅಧಿಕಾರಿ ಮತ್ತು ಜಿಲ್ಲಾ ಪಶುಸಂಗೋಪನಾ ಅಧಿಕಾರಿಗಳು ಸಮಿತಿಯ ಸದಸ್ಯರಾಗಿರುತ್ತಾರೆ. ಜನವಾಸ್ತವ್ಯವಿರುವ ಸನಿಹದ ಖಾಸಗಿ ವ್ಯಕ್ತಿಗಳ ಜಾಗದಲ್ಲಿ ಕುರುಚಲು ಕಾಡು ತುಂಬಿಕೊಂಡಿದ್ದಲ್ಲಿ ಈ ಜಾಗ ಶುಚೀಕರಿಸಲು ಸಂಬಂಧಪಟ್ಟ ಜಾಗದ ಮಾಳಿಕರಿಗೆ ನೋಟೀಸು ನೀಡುವಂತೆ ಪಂಚಾಯಿತಿ ಕಾರ್ಯದರ್ಶಿಗೆ ಸಚಿವರು ಸೂಚಿಸಿದರು.
ಬೆಳೆನಾಶಗೊಳಿಸುವ ಹಾಗೂ ಮಾನವ ಜೀವಕ್ಕೆ ಅಪಾಯ ತಂದೊಡ್ಡುದ ಕಾಡುಹಂದಿಗಳನ್ನು ಹತ್ಯೆಗೈಯಲು ಪರವಾನಗಿ ಹೊಂದಿದ ಶಾರ್ಪ್‍ಶೂಟರ್‍ಗಳಿಗೆ ಸರ್ಕಾರ ಗೌರವಧನ ನೀಡಲಿದೆ. ಈಗಾಗಲೇ ಪರಿಣಿತ ಶಾರ್ಪ್‍ಶೂಟರ್‍ಗಳ ಪಟ್ಟಿಯನ್ನು ಅರಣ್ಯ ಇಲಾಖೆ ಹೊಂದಿದೆ. ಕಾಡುಹಂದಿಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಆಯಾ ಸ್ಥಳೀಯಾಡಳಿತ ಸಂಸ್ಥೆಗಳಿಗೆ ತಲಾ ಒಂದು ಲಕ್ಷ ರೂ. ಒದಗಿಸಲು ಆದೇಶ ಹೊರಡಿಸಲಾಗಿದೆ.
ಜಿಲ್ಲೆಯಲ್ಲಿ ಹಾವು ಕಡಿತದಿಂದ ಸಂಭವಿಸುತ್ತಿರುವ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿ ಹಾವಿನ ವಿಷ ಪ್ರತಿರೋಧ ಚಿಕಿತ್ಸೆ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸೂಚನೆಗಳನ್ನು ನೀಡಲಾಗಿದೆ.
ಮುಳಿಯಾರ್ ಮತ್ತು ಕಾರಡ್ಕ ಅರಣ್ಯ ಪ್ರದೇಶಗಳಲ್ಲಿ ಅಪಾಯಕಾರಿಯಾಗಿ ಹಾಗೂ ವ್ಯಾಪಕವಾಗಿ ಬೆಳೆದುನಿಂತಿರುವ ಅಕೇಶಿಯಾ ಮರಗಳು, ಇತರ ಪಂಚಾಯಿತಿ ವ್ಯಾಫ್ತಿಯಲ್ಲಿ ಬೆಳೆದಿರುವ ಅಪಾಯಕಾರಿ ಹಾಗೂ ಮಾರಕ ಗಿಡಗಂಟಿಗಳನ್ನು ನಿರ್ಮೂಲನೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆಯೂ ಸಚಿವರು ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್, ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್, ಜಿಲ್ಲಾ ಪೆÇಲೀಸ್ ಮುಖ್ಯಸ್ಥ ವಿಜಯ ಭರತ್ ರೆಡ್ಡಿ, ಕಾಸರಗೋಡು ಟಿಡಿಒ ಕೆ.ಕೆ. ಮೋಹನ್ ದಾಸ್, ಎಲ್‍ಎಸ್‍ಜಿಡಿ ಟಿಡಿಓ ಕೆ.ಕೆ ಮೋಹನ್‍ದಾಸ್, ಎಲ್‍ಎಸ್‍ಜಿಡಿ ಉಪನಿರ್ದೇಶಕ ಹರಿದಾಸ್, ಜಿಲ್ಲಾ ಎಸ್‍ಸಿ ಪ್ರಭಾರ ಅಧಿಕಾರಿ ಪಿ. ಮಿನಿ, ಕೃಷಿ ಇಲಾ,ಖೆ ಡಿಡಿ ಮಿನಿ ಮೆಮನ್ ಪಿ, ಪಶುಸಂಗೋಪನಾ ಇಲಾಖೆ ಡಿಡಿ ಪ್ರಭಾರ ಡಾ. ಪಿ. ಶೈಜಿ ಉಪಸ್ಥಿತರಿದ್ದರು.


