ಕಾಸರಗೋಡು: ಕಾನೂನು ಮತ್ತು ಜೈಲುಗಳಂತಹ ಸಂಬಂಧಿತ ಕ್ಷೇತ್ರಗಳಲ್ಲಿನ ಸಮಕಾಲೀನ ಸವಾಲುಗಳನ್ನು ಎದುರಿಸುವ ನಿಟ್ಟನಲ್ಲಿ ಕಾನೂನು ಸಮುದಾಯವನ್ನು ಸಿದ್ಧಪಡಿಸಲು ವಕೀಲರ ಮಂಡಳಿಯ ಜವಾಬ್ದಾರಿವಹಿಸಬೇಕಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಉತ್ತರಪ್ರಾಂತ್ ಕಾರ್ಯವಾಹ ಪಿ ಎನ್ ಈಶ್ವರನ್ ಹೇಳಿದರು.
ಅವರು ಮಂಜೇಶ್ವರದ ಅನಂತೇಶ್ವರ ದೇವಸ್ಥಾನಸಭಾಂಗಣದಲ್ಲಿ ನಡೆದ ಕೇರಳ ರಾಜ್ಯ ವಕೀಲರ ಪರಿಷತ್ ಶಿಬಿರ ಉದ್ಘಾಟಿಸಿ ಮಾತನಾಡಿದರು.
ವಕೀಲರ ಪರಿಷತ್ತಿನ ಮಾಜಿ ರಾಷ್ಟ್ರೀಯ ಅಧ್ಯಕ್ಷ ಎಂ. ಪಿ. ನರುಕುಂದ್ ಮುಖ್ಯ ಭಾಷಣ ಮಾಡಿದರು. ಕಾರ್ಯಕರ್ತ ಸಿಬಿರಾಮ್, ರಾಜ್ಯ ಅಧ್ಯಕ್ಷ ವಕೀಲ ರಾಜೇಂದ್ರ ಕುಮಾರ್. ರಾಷ್ಟ್ರೀಯ ಉಪಾಧ್ಯಕ್ಷ ಎ. ಆರ್. ರಾಜೇಂದ್ರನ್, ಸಿ.ಕೆ. ಶ್ರೀನಿವಾಸನ್. ಬಿ. ಅಶೋಕ್, ಎಸ್. ರಾಜೇಂದ್ರನ್, ಪಳನಿಕುಮಾರ್, ಬಿ ರವೀಂದ್ರನ್, ಎಸಿ ಅಶೋಕ್ ಕುಮಾರ್ ಮೊದಲಾದವರು ವಿವಿಧ ವಿಷಯಗಳ ಕುರಿತು ಮಾತನಾಡಿದರು. ವಕೀಲ ನವೀನ್ ರಾಜ್ ಕೆ ಜೆ ಸ್ವಾಗತಿಸಿದರು. ವಕೀಲ ಜೊಜೊ ವಂದಿಸಿದರು.





