ಮಂಜೇಶ್ವರ: ಬಿಜೆಪಿ ವರ್ಕಾಡಿ ಪಂಚಾಯಿತಿ ಸಮಿತಿ ನೂತನ ಕಾರ್ಯಾಲಯದ ಉದ್ಘಾಟನೆಯನ್ನು ಬಿಜೆಪಿ ಕಾಸರಗೋಡು ಮಾಜಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ನೆರವೇರಿಸಿದರು. ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್. ಧ್ವಜಾರೋಹಣ ನಡೆಸಿದರು.
ಪಕ್ಷದ ಧೀಮಂತ ನೇತಾರರಾದ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಮತ್ತು ದೀನದಯಾಳ್ ಉಪಾಧ್ಯಾಯ ಆವರು ಹಾಕಿಕೊಟ್ಟ ಆದರ್ಶದಿಂದ ಪಕ್ಷ ಪ್ರಾಜ್ವಲ್ಯಮಾನವಾಗಿ ಬೆಳೆಯಲು ಸಾಧ್ತಯವಾಗಿದೆ. ಮುಂದೆ ನಡೆಯಲಿರುವ ಸ್ಥಳೀಯಾಡಳಿತ ಚುನಾವಣೆಯಲ್ಲಿ ವರ್ಕಾಡಿ ಪಂಚಾಯಿತಿಯಲ್ಲಿ ಬಿಜೆಪಿ ಅಧಿಕಾರಕ್ಕೇರಲಿದೆ ಎಂದು ತಿಳಿಸಿದರು. ಬಿಜೆಪಿ ವರ್ಕಾಡಿ ಪಂಚಾಯಿತಿ ಸಮಿತಿ ಅಧ್ಯಕ್ಷ ಭಾಸ್ಕರ ಪೆÇಯ್ಯೆ ಅಧ್ಯಕ್ಷತೆ ವಹಿಸಿದ್ದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಣಿಕಂಠ ರೈ, ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ., ಪ್ರಧಾನ ಕಾರ್ಯದರ್ಶಿಗಳಾದ ಕೆ.ವಿ. ಭಟ್, ಯತಿರಾಜ್, ಕುಂಬಳೆ ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ, ಹಿರಿಯ ಮುಖಂಡರಾದ ಸತೀಶ್ ಚಂದ್ರ ಭಂಡಾರಿ, ಧೂಮಪ್ಪ ಶೆಟ್ಟಿ, ವಿಜಯ್ ಕುಮಾರ್ ರೈ, ಸುಧಾಮ ಗೋಸಾಡ, ಹರೀಶ್ಚಂದ್ರ ಮಂಜೇಶ್ವರ, ಗೋಪಾಲ ಶೆಟ್ಟಿ ಅರಿಬೈಲ್, ನಾರಾಯಣ ನಾವಡ, ನಂದಕುಮಾರ್ ನಾಯ್ಕ್, ವಸಂತ ನಾಯ್ಕ್, ಆನಂದ ತಚ್ಚಿರೆ ಉಪಸ್ಥಿತರಿದ್ದರು.





