ಸಮರಸ ಚಿತ್ರಸುದ್ದಿ: ಕಾಸರಗೋಡು: ಕಾರ್ಗಿಲ್ ವಿಜಯ್ ದಿವಸ್ ಆಚರಣೆಯ ಅಂಗವಾಗಿ, ಕಾಸರಗೋಡು ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಅವರು ವಿದ್ಯಾನಗರ ಸಿವಿಲ್‍ಸ್ಟೇಶನ್ ವಠಾರದಲ್ಲಿರುವ ಕಾರ್ಗಿಲ್ ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಿಸಿ ವೀರಮೃತ್ಯುಪಡೆದ ಯೋಧರಿಗೆ ನಮನ ಸಲ್ಲಿಸಿದರು. ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಪಿ ಅಖಿಲ್, ನಿವೃತ್ತ ಯೋಧರ ಸಂಘಟನೆ ಪ್ರತಿನಿಧಿಗಳು ಮತ್ತು ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.





