ಕಾಸರಗೋಡು: ಕಾಞಂಗಾಡ್ ದಕ್ಷಿಣದಲ್ಲಿ ಎಚ್‍ಪಿಸಿಎಲ್ ಟ್ಯಾಂಕರ್ ಲಾರಿ ಪಲ್ಟಿಯಾಗಿದ್ದ ಟ್ಯಾಂಕರ್ ಮೇಲಕ್ಕೆತ್ತುವ ಕಾರ್ಯಾಚರಣೆ ಶುಕ್ರವಾರ ತಡರಾತ್ರಿ ಪೂರ್ಣಗೊಂಡಿದೆ. ಅಧಿಕಾರಿಗಳು, ಪೆÇಲೀಸರು, ಸಾರ್ವಜನಿಕ ಪ್ರತಿನಿಧಿಗಳು, ಅಗ್ನಿಶಾಮಕ ದಳ, ಎಚ್‍ಪಿಸಿಎಲ್ ಅಧಿಕಾರಿಗಳು ಮತ್ತು ಸ್ಥಳೀಯರು ಒಟ್ಟಾಗಿ ನಡೆಸಿದ ಕೆಲಸದಿಂದ ಕಾರ್ಯಚರಣೆ ಯಶಸ್ವಿಯಾಗಿರುವುದಾಗಿ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ತಿಳಿಸಿದ್ದಾರೆ.
ಈ ಟ್ಯಾಂಕರ್‍ನಿಂದ ಅಡುಗೆ ಅನಿಲ ಸ್ಥಳಾಂತರಿಸಲು ಮೂರು ಟ್ಯಾಂಕರ್‍ಗಳು ಸಿದ್ಧವಾಗಿದ್ದರೂ, ಸೋರಿಕೆ ಸಕಾಳದಲ್ಲಿ ತಡೆಗಟ್ಟಲಾಗಿತ್ತು. ಜನಪ್ರತಿನಿಧೀಗಳು, ಕೆಎಸ್‍ಇಬಿ, ಮೋಟಾರ್ ವಾಹನ, ಆರೋಗ್ಯ, ಮತ್ತು ಎಚ್‍ಪಿಸಿಎಲ್ ಕ್ಷಿಪ್ರ ಕಾರ್ಯಾಚರಣೆ ತಂಡದ ನಿರಂತರ ಕಾರ್ಯಾಚರಣೆಯ ನಂತರ ಟ್ಯಾಂಕರ್ ಮೇಲೆತ್ತಲಾಗಿದೆ. ಮಂಗಳೂರಿನಿಂದ ಆಗಮಿಸಿದ್ದ ಎಚ್‍ಪಿಸಿಎಲ್ ತಂಡದ ನಿರಂತರ ಕಾರ್ಯಾಚರಣೆಯಿಂದ ಸೋರಿಕೆ ನಿಯಂತ್ರಿಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಘಟನಾ ಸ್ಥಳದಿಂದ ಒಂದು ಕಿಲೋಮೀಟರ್ ವ್ಯಾಪ್ತಿಯೊಳಗಿನ ಕುಟುಂಬಗಳಿಗೆ ಮುತ್ತಪ್ಪನ್ ಕಾವ್ ಆಡಿಟೋರಿಯಂ ಮತ್ತು ಆರಂಗಡಿ ಜಿಎಲ್‍ಪಿಎಸ್‍ಗೆ ಸ್ಥಳಾಂತರಿಸಲಾಗಿತ್ತು. ಕೆಲವರು ಸಂಬಂಧಿಕರ ಮನೆಗಳಿಗೆ ಸ್ಥಳಾಂತರಗೊಂಡಿದ್ದರು. ಆ ಪ್ರದೇಶದಲ್ಲಿ ವಿದ್ಯತ್ ಸರಬರಾಜು ಸ್ಥಗಿತಗೊಳಿಸಿ, ಅಂಗಡಿಗಳು ಮತ್ತು ಮಾರುಕಟ್ಟೆಗಳನ್ನು ಮುಚ್ಚಲಾಗಿತ್ತು. ಕಾರ್ಯಾಚರಣೆ ಪೂರ್ತಿಗೊಳ್ಳುತ್ತಿದ್ದಂತೆ ಸ್ಥಳೀಯ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ.





