ಕಾಸರಗೋಡು: ಮತದಾರರ ಪಟ್ಟಿಗೆ ಆನ್‍ಲೈನ್ ಮೂಲಕ ಹೆಸರು ನೋಂದಾಯಿಸಲು, ಅಳಿಸಲು ಮತ್ತು ತಿದ್ದುಪಡಿ ಮಾಡಲು ರಾಜ್ಯ ಚುನಾವಣಾ ಆಯೋಗ ತನ್ನದೇ ಆದ ಪೋರ್ಟಲ್ ಮೂಲಕ ವ್ಯವಸ್ಥೆ ಜಾರಿಗೊಳಿಸಿದೆ.
ರಾಜ್ಯ ಚುನಾವಣಾ ಆಯೋಗದ ವೆಬ್‍ಸೈಟ್‍ಗೆ (www.sec.kerala.gov.in) ಭೇಟಿ ನೀಡಿ ಸೈನ್ ಇನ್ ಪುಟದಲ್ಲಿ ನಾಗರಿಕ ನೋಂದಣಿ ಮೂಲಕ ತಮ್ಮ ಹೆಸರು, ಮೊಬೈಲ್ ಸಂಖ್ಯೆ ಮತ್ತು ಪಾಸ್‍ವರ್ಡ್ ಅನ್ನು ನಮೂದಿಸುವ ಮೂಲಕ ಪೆÇ್ರಫೈಲ್ ಅನ್ನು ರಚಿಸಬಹುದು. ಲಾಗಿನ್ ಆಗಲು ಬಳಕೆದಾರ ಹೆಸರು ಓಟಿಪಿ ದೃಢೀಕರಣಕ್ಕಾಗಿ ಅವರು ಬಳಸುವ ಮೊಬೈಲ್ ಸಂಖ್ಯೆಯೇ ಆಗಿರುತ್ತದೆ
ಬಳಕೆದಾರಹೆಸರು ಮತ್ತು ಪಾಸ್‍ವರ್ಡ್ ಅನ್ನು ನಮೂದಿಸುವ ಮೂಲಕ ಲಾಗಿನ್ ಮಾಡಿ. ಅರ್ಜಿಗಳನ್ನು ಪೆÇ್ರಫೈಲ್‍ನಲ್ಲಿ ಫಾರ್ಮ್ 4, ಫಾರ್ಮ್ 5, ಫಾರ್ಮ್ 6 ಮತ್ತು ಫಾರ್ಮ್ 7 ರಲ್ಲಿಯೂ ಸಲ್ಲಿಸಬಹುದಾಗಿದೆ. ಆಯಾ ಪೆÇ್ರಫೈಲ್ ಮೂಲಕ ಸಲ್ಲಿಸಲಾದ ಅರ್ಜಿಗಳ ಪಟ್ಟಿ ಸಂಬಂಧಿತ ನಮೂನೆಗಳು ಡ್ಯಾಶ್‍ಬೋರ್ಡ್‍ನಲ್ಲಿಯೂ ಲಭ್ಯವಿರಲಿದೆ. ಅರ್ಜಿದಾರರು ತಮ್ಮ ಪ್ರತಿ ಅರ್ಜಿಯ ಸ್ಥಿತಿ ಆಯ್ಕೆಯ ಮೂಲಕ ಪರಿಶೀಲಿಸಲೂ ಅವಕಾಶವಿರಲಿದೆ. ಇದಕ್ಕಾಗಿ ಹಲವು ಹಂತಗಳನ್ನು ಸೂಚಿಸಲಾಗಿದ್ದು, ಇದೇ ಪ್ರಕಾರ ಆನ್‍ಲೈನ್ ಮೂಲಕ ಅಪ್‍ಲೋಡ್ ಮಾಡಿದ ನಂತರ ಸಬ್‍ಮಿಟ್ ಮಾಡುವ ಅವಕಾಶ ಕಲ್ಪಿಸಲಾಗಿದೆ.





