ಮಂಜೇಶ್ವರ: ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ನ ನೇತೃತ್ವದಲ್ಲಿ ಯುವಶಕ್ತಿ ಫ್ರೆಂಡ್ಸ್ ಗ್ರಂಥಾಲಯ ಸುಭಾಷ್ ನಗರದ ಸಹಯೋಗದೊಂದಿಗೆ ಜಿ.ಯಚ್.ಎಸ್.ಎಸ್ ಬೇಕೂರಿನಲ್ಲಿ ತಾಲೂಕು ಮಟ್ಟದ ವಾಚನ ಪಕ್ಷಾಚರಣೆಯ ಸಮಾರೋಪ ಹಾಗೂ ಐ.ವಿ. ದಾಸ್ ಅವರ ಸಂಸ್ಕರಣೆ ನಡೆಯಿತು.
ರಾಜ್ಯ ಲೈಬ್ರರಿ ಕೌನ್ಸಿಲ್ ನ ಕಾರ್ಯದರ್ಶಿಯಾಗಿದ್ದ ನ್ಯಾಯವಾದಿ ಪಿ ಅಪ್ಪು ಕುಟ್ಟನ್ ಉದ್ಘಾಟಿಸಿದರು. ಕೇರಳ ರಾಜ್ಯ ಲೈಬ್ರರಿಯ ಕಾರ್ಯಯೋಜನೆಗಳ ಬಗ್ಗೆ ಸವಿವರವಾಗಿ ಅವರು ಈ ಸಂದರ್ಭ ತಿಳಿಸಿದರು.
ರಾಜ್ಯ ಲೈಬ್ರರಿ ಕೌನ್ಸಿಲ್ ಸದಸ್ಯ ಅಹಮ್ಮದ್ ಹುಸೈನ್ ಮಾಸ್ತರ್ ಸಂಸ್ಕರಣೆ ನಡೆಸಿದರು. ಪ್ರಾಂಶುಪಾಲ ಬಾಲಕೃಷ್ಣ, ಮುಖೋಪಾಧ್ಯಾಯಿನಿ ಲಕ್ಷ್ಮಿ ಟೀಚರ್, ಗ್ರಾಮ ಪಂಚಾಯತಿ ಸದಸ್ಯೆ ಸುಜಾತ ಶೆಟ್ಟಿ ಶುಭ ಹಾರೈಸಿದರು. ತಾಲೂಕು ಲೈಬ್ರರಿ ಕೌನ್ಸಿಲ್ ಅಧ್ಯಕ್ಷೆ ಶ್ರೀಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಯುವಶಕ್ತಿ ಗ್ರಂಥಾಲಯದ ಅಧ್ಯಕ್ಷ ಲಕ್ಷ್ಮಣ ಪೂಜಾರಿ, ಜಿಲ್ಲಾ ಲೈಬ್ರರಿ ಕೌನ್ಸಿಲ್ ಸದಸ್ಯ ದಾಸಪ್ಪ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಕಮಲಾಕ್ಷ. ಡಿ ಸ್ವಾಗತಿಸಿ, ರವೀಂದ್ರ ಶೆಟ್ಟಿ ವಂದಿಸಿದರು.






