ಕಾಸರಗೋಡು: ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಚೆಂಗಳದಲ್ಲಿ ಮನೆ ಬೀಗ ಒಡೆದು ನುಗ್ಗಿದ ಕಳ್ಳರು 15ಪವನು ಚಿನ್ನ ಹಾಗೂ 15ಸಾವಿರ ರೂ. ನಗದು ಕಳವುಗೈದಿದ್ದಾರೆ. ಚೆಂಗಳ £ನಾಲ್ಕನೇ ಮೈಲಿಗಲ್ಲು ನಿವಾಸಿ ಸತ್ತಾರ್ ಕೆ.ಎ ಎಂಬವರ ಮನೆಯಲ್ಲಿ ಈ ಕಳವು ನಡೆದಿದೆ. ಸತ್ತಾರ್ ಅವರು ಬುಧವರ ಸೂರ್ಲಿನಲ್ಲಿರುವ ತನ್ನ ಸಹೋದರನ ಮನೆಗೆ ಕುಟುಂಬ ಸಮೇತ ತೆರಳಿದ್ದು, ಅಲ್ಲಿಂದ ವಾಪಸಾಗುವಾಗ ಕಳವು ಬೆಳಕಿಗೆ ಬಂದಿದೆ. ಮನೆಯ ಎದುರಿನ ಬಾಗಿಲ ಬೀಗ ಒಡೆದು ಮನೆ ಕೊಠಡಿಯೊಳಗಿನ ಕಪಾಟನ್ನು ಮುರಿದು ಕೃತ್ಯವೆಸಗಲಾಗಿದೆ. ಕಪಾಟಿನಲ್ಲಿರಿಸಿದ್ದ ಬಟ್ಟೆಯನ್ನು ಚಲ್ಲಾಪಿಲ್ಲಿಗೊಳಿಸಿದ್ದರೆ, ಇನ್ನೊಂದು ಕಪಾಟಿನಲ್ಲಿದ್ದ ನಗ, ನಗದು ದೋಚಿದ್ದಾರೆ. ಸತ್ತಾರ್ ಅವರು ನೀಡಿದ ದೂರಿನನ್ವಯ ವಿದ್ಯಾನಗರ ಠಾಣೆ ಪೊಲೀಸರು ಕೇಸು ದಾಖಳಿಸಿಕೊಂಡಿದ್ದಾರೆ. ಸ್ಥಳಕ್ಕೆ ಬೆರಳಚ್ಚು, ಶ್ವಾನದಳ ಆಗಮಿಸಿ ತಪಾಸಣೆ ನಡೆಸಿದೆ.

