HEALTH TIPS

ಭಾರತೀಯ ಮೂಲದ ಕೃಷಾಂಗಿ ಮೆಶ್ರಮ್: 18ಕ್ಕೆ ಪದವಿ; 21ಕ್ಕೆ ಬ್ರಿಟನ್‌ನ ಸಾಲಿಸಿಟರ್

ಇಂಗ್ಲೆಂಡ್: ಭಾರತೀಯ ಮೂಲಕ 21 ವರ್ಷದ ಕಾನೂನು ಪದವೀಧರೆ ಕೃಷಾಂಗಿ ಮೆಶ್ರಾಮ್ ಅವರು ಇಂಗ್ಲೆಂಡ್ ಮತ್ತು ವೇಲ್ಸ್‌ನ ಸಾಲಿಸಿಟರ್‌ ಆಗಿ ನೇಮಕಗೊಂಡಿದ್ದು, ಈ ಹುದ್ದೆ ಪಡೆದ ಅತ್ಯಂತ ಕಿರಿಯ ವಕೀಲೆ ಎಂದೆನಿಸಿಕೊಂಡಿದ್ದಾರೆ. 

ಪಶ್ಚಿಮ ಬಂಗಾಳ ಮೂಲದವರಾದ ಕೃಷಾಂಗಿ ಸದ್ಯ ಸಂಯುಕ್ತ ಅರಬ್ ಸಂಸ್ಥಾನದಲ್ಲಿ ನೆಲೆಸಿದ್ದಾರೆ.

ತಮ್ಮ 15ನೇ ವಯಸ್ಸಿನಲ್ಲಿ ಇವರು ಮಿಲ್ಟನ್‌ನ ಕೀನ್ಸ್‌ ಮುಕ್ತ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ವ್ಯಾಸಂಗ ಆರಂಭಿಸಿದರು. 18ನೇ ವಯಸ್ಸಿನಲ್ಲಿ ಮೊದಲ ದರ್ಜೆಯಲ್ಲಿ ಹಾನರ್ಸ್ ಪದವಿ ಪಡೆದರು.

'ನಾನು 15 ವರ್ಷದವಳಿದ್ದಾಗ ಕಾನೂನು ಪದವಿ ದಾಖಲಾಗಲು ಮುಕ್ತ ವಿಶ್ವವಿದ್ಯಾಲಯ ಅವಕಾಶ ಮಾಡಿಕೊಟ್ಟಿತು. ಇದಕ್ಕಾಗಿ ನಾನು ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಈ ಅವಧಿಯಲ್ಲಿ ಕಾನೂನು ವೃತ್ತಿಗೆ ನಾನು ಅಡಿಪಾಯ ಹಾಕಿಕೊಳ್ಳುವುದರ ಜತೆಗೆ, ಈ ಕ್ಷೇತ್ರದೆಡೆಗೆ ಅಪಾರವಾದ ಆಸಕ್ತಿ ಹಾಗೂ ಬದ್ಧತೆಯನ್ನು ಬೆಳೆಸಿಕೊಳ್ಳಲು ಅವಕಾಶವಾಯಿತು' ಎಂದಿದ್ದಾರೆ. ಈ ಕುರಿತು ಅವರು ತಮ್ಮ ಲಿಂಕ್‌ಡಿನ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇದೇ ವಿಷಯವಾಗಿ ಕಳೆದ ವಾರ ಲೇಖನವನ್ನು ಪ್ರಕಟಿಸಿದ್ದ ಮುಕ್ತ ವಿಶ್ವವಿದ್ಯಾಲಯ, 'ಕಾನೂನು ಪದವೀಧರೆ ಕೃಷಾಂಗಿ ಮತ್ತೊಮ್ಮೆ ಇತಿಹಾಸ ನಿರ್ಮಿಸಿದ್ದಾರೆ' ಎಂದಿತ್ತು.

ಯಾರು ಈ ಕೃಷಾಂಗಿ..?

ಪಶ್ವಿಮ ಬಂಗಾಳಕ್ಕೆ ಸೇರಿದವರಾದ ಕೃಷಾಂಗಿ ಮೆಶ್ರಮ್ ಅವರು ಮಯಾಪುರ ಇಸ್ಕಾನ್‌ ಸಮುದಾಯದಲ್ಲಿ ಬೆಳದವರು. ತಮ್ಮ ಹೈಸ್ಕೂಲ್ ಅನ್ನು ಮಯಾಪುರದಲ್ಲಿ ಪೂರ್ಣಗೊಳಿಸಿದರು.

ಮುಕ್ತ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿಗೆ ಸೇರಿದ ಅವರು, ಮೂರು ವರ್ಷಗಳಲ್ಲಿ ಅದನ್ನು ಪೂರೈಸಿದರು.

18ನೇ ವಯಸ್ಸಿಗೆ ಅವರು ಮೊದಲ ದರ್ಜೆಯಲ್ಲಿ ಕಾನೂನು ಪದವಿ ಪಡೆದರು. ಆ ಮೂಲಕ ಮುಕ್ತ ವಿಶ್ವವಿದ್ಯಾಲಯದಿಂದ ಪದವಿ ಪಡೆದ ಅತ್ಯಂತ ಕಿರಿಯ ವಿದ್ಯಾರ್ಥಿ ಎಂದೆನಿಸಿಕೊಂಡರು. 2022ರಲ್ಲಿ ಅಂತರರಾಷ್ಟ್ರೀಯ ಕಾನೂನು ಸಂಸ್ಥೆಯೊಂದರಲ್ಲಿ ನೌಕರಿಗೆ ಸೇರಿದರು.

ಹಾರ್ವರ್ಡ್‌ನ ಆನ್‌ಲೈನ್ ಜಾಗತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ಕೃಷ್ಣಾಂಗಿ, ಸಿಂಗಪುರದಲ್ಲಿ ಕೆಲಸ ಮಾಡಿದ ಅನುಭವವನ್ನೂ ಹೊಂದಿದ್ದಾರೆ.

ಫಿನ್‌ಟೆಕ್‌, ಬ್ಲಾಕ್‌ಚೈನ್‌, ಕೃತಕ ಬುದ್ಧಿಮತ್ತೆ ಸೇರಿದಂತೆ ಹಲವು ವಿಷಯಗಳಲ್ಲಿ ಆಸಕ್ತಿ ಹೊಂದಿದ್ದಾರೆ.

ವ್ಯವಹಾರ ಕ್ಷೇತ್ರ ಮತ್ತು ಖಾಸಗಿ ವ್ಯಕ್ತಿಗಳಿಗೆ ಕಾನೂನು ಸೇವೆಗಳನ್ನು ನೀಡುವ ಉದ್ದೇಶವನ್ನೂ ಹೊಂದಿರುವುದಾಗಿ ಅವರು ಹೇಳಿದ್ದಾರೆ. ಬ್ರಿಟನ್ ಮತ್ತು ಸಂಯುಕ್ತ ಅರಬ್ ಸಂಸ್ಥಾನದಲ್ಲಿರುವ ಮುಂಚೂಣಿಯ ಕಾನೂನು ಸೇವೆಗಳ ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ದೇಶ ಹೊಂದಿರುವುದಾಗಿಯೂ ತಮ್ಮ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದಾರೆ. ಸದ್ಯ ವ್ಯಾಪಕವಾಗಿರುವ ಡಿಜಿಟಲ್ ತಂತ್ರಜ್ಞಾನ ಆಧಾರಿತ ಕಾನೂನು ತೊಡಕುಗಳ ನಿವಾರಣೆಯತ್ತ ಆಸಕ್ತಿ ಹೊಂದಿರುವುದಾಗಿ ಕೃಷಾಂಗಿ ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries