HEALTH TIPS

ಪರ್ಸನಲ್ ಡಿಟೇಲ್ಸ್ ಸುರಕ್ಷಿತವಾಗಿರಬೇಕಾ?, ಇಂದೇ Mobileನಲ್ಲಿ ಈ 5 ಸ್ಮಾರ್ಟ್ ಸೆಟ್ಟಿಂಗ್‌ ಆನ್ ಮಾಡಿ

ಇಂತಹ ಸಮಯದಲ್ಲಿ ಫೋನ್ ಕಳೆದುಕೊಂಡರೆ ಅದು ಎಲ್ಲಾ ದೃಷ್ಟಿಯಿಂದಲೂ ಡೇಂಜರ್. ಹಾಗಾಗಿ ಎಲ್ಲಾ ವೈಯಕ್ತಿಕ ವಿವರಗಳನ್ನು ಸುರಕ್ಷಿತವಾಗಿಡುವುದು ಬಹಳ ಮುಖ್ಯ.

ಈಗೀಗಂತೂ ಸ್ಮಾರ್ಟ್‌ಫೋನ್ ಎಲ್ಲರಿಗೂ ಅನಿವಾರ್ಯವಾಗಿದೆ. ಇಂದು ಬಹುತೇಕ ಎಲ್ಲರ ಬಳಿಯೂ ಸ್ಮಾರ್ಟ್‌ಫೋನ್ ಇದೆ.

ಜನರು ಅದಿಲ್ಲದೇ ಒಂದು ದಿನವೂ ಬದುಕಲು ಸಾಧ್ಯವಿಲ್ಲ ಅನ್ನುವಂತಾಗಿದೆ. ಅಂದಹಾಗೆ ಫೋನ್‌ನಲ್ಲಿ ವೈಯಕ್ತಿಕ ಚಾಟ್‌ಗಳು, ಬ್ಯಾಂಕ್ ವಿವರಗಳು ಮತ್ತು ಅನೇಕ ಖಾಸಗಿ ಫೋಟೋಗಳಿರುತ್ತವೆ. ಇಂತಹ ಸಮಯದಲ್ಲಿ ಫೋನ್ ಕಳೆದುಕೊಂಡರೆ ಅದು ಎಲ್ಲಾ ದೃಷ್ಟಿಯಿಂದಲೂ ಡೇಂಜರ್. ಹಾಗಾಗಿ ಎಲ್ಲಾ ವೈಯಕ್ತಿಕ ವಿವರಗಳನ್ನು ಸುರಕ್ಷಿತವಾಗಿಡುವುದು ಬಹಳ ಮುಖ್ಯವಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಹ್ಯಾಕರ್‌ಗಳು ತುಂಬಾ ಸಕ್ರಿಯರಾಗಿದ್ದಾರೆ. ಪ್ರತಿದಿನ ಹೆಚ್ಚುತ್ತಿರುವ ಆನ್‌ಲೈನ್ ವಂಚನೆಯ ಸುದ್ದಿಯನ್ನು ನೀವು ಕೇಳಿರಬೇಕು. ನಿಮ್ಮ ಎಲ್ಲಾ ವೈಯಕ್ತಿಕ ವಿವರಗಳನ್ನು ಕೇವಲ ಒಂದು ಕ್ಲಿಕ್ ಮೂಲಕ ಅಥವಾ ಫೋನ್‌ನಲ್ಲಿ ಲಿಂಕ್ ಓಪನ್ ಮಾಡುವ ಮೂಲಕ ಸೋರಿಕೆ ಆಗಬಹುದು. ಹಾಗಾಗಿ ನಿಮ್ಮ ವೈಯಕ್ತಿಕ ವಿವರಗಳನ್ನು ಸುರಕ್ಷಿತವಾಗಿಡಲು ನೀವು ಫೋನ್‌ನಲ್ಲಿ ಸ್ಮಾರ್ಟ್ ಸೆಟ್ಟಿಂಗ್‌ಗಳನ್ನು ಆನ್ ಮಾಡಬೇಕೇ? ನೋಡೋಣ ಬನ್ನಿ..

ನೀವು ಹೊಸ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದಾಗಲೆಲ್ಲಾ ಅನುಮತಿ (allow) ಕೇಳುತ್ತದೆ. ಇದು ಮಾಹಿತಿ ಸೋರಿಕೆಯಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಫೋನ್ ಸೆಟ್ಟಿಂಗ್‌ಗಳಿಗೆ ಹೋಗಿ, ತಕ್ಷಣವೇ ಅನುಪಯುಕ್ತ ಅನುಮತಿ (Useless Permissions)ನಿರ್ಬಂಧಿಸಿ.

ನಿಮ್ಮ ಫೋನ್ ಕಳುವಾಗುವ ಅಪಾಯ ಯಾವಾಗಲೂ ಇರುತ್ತದೆ. ಅಂತಹ ಸಮಯದಲ್ಲಿ ನಿಮ್ಮ ಎಲ್ಲಾ ಅಪ್ಲಿಕೇಶನ್‌ಗಳು, ಜೊತೆಗೆ ಫೋನ್‌ಗೂ ಲಾಕ್ ಹಾಕಿ. ಒಂದು ವೇಳೆ ಕದ್ದಿದ್ದರೂ ಸಹ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಯಾರಾದರೂ ಪಡೆಯುವುದನ್ನು ತಡೆಯುತ್ತದೆ.

ಸೋಶಿಯಲ್ ಮೀಡಿಯಾ ಅಪ್ಲಿಕೇಶನ್‌ಗಳು ಬಳಕೆದಾರರ ಹುಡುಕಾಟ ಇತಿಹಾಸ, ಬ್ರೌಸಿಂಗ್ ಮಾದರಿ ಮತ್ತು ಅಪ್ಲಿಕೇಶನ್ ಬಳಕೆಯನ್ನು ಟ್ರ್ಯಾಕ್ ಮಾಡುತ್ತಲೇ ಇರುತ್ತವೆ. ಇದು ನಿಮ್ಮ ಮಾಹಿತಿ ಸೋರಿಕೆಯಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಇದನ್ನೆಲ್ಲಾ ತಪ್ಪಿಸಲು, ನೀವು ನಿಮ್ಮ Google ಖಾತೆಯ ಸೆಟ್ಟಿಂಗ್‌ಗಳಲ್ಲಿ 'Data & Privacy'ಗೆ ಹೋಗಬೇಕು. ಇದರ ನಂತರ, 'Web & App Activity' ಅನ್ನು ಆಫ್ ಮಾಡಿ.

ವಿಮಾನ ನಿಲ್ದಾಣಗಳು, ಮಾಲ್‌ಗಳು ಮತ್ತು ಕೆಫೆಗಳಂತಹ ಸ್ಥಳಗಳಲ್ಲಿ ಉಚಿತ ವೈ-ಫೈ ಲಭ್ಯವಿದೆ . ಅವುಗಳಿಗೆ ಸಂಪರ್ಕಿಸಲು ಎಂದಿಗೂ ಪ್ರಯತ್ನಿಸಬೇಡಿ. ಸಾರ್ವಜನಿಕ ನೆಟ್‌ವರ್ಕ್‌ಗಳಲ್ಲಿ ಬ್ಯಾಂಕಿಂಗ್ ವಹಿವಾಟುಗಳು ಅಥವಾ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವುದರಿಂದ ಅವು ಸೋರಿಕೆಯಾಗುವ ಅಪಾಯ ಹೆಚ್ಚಾಗುತ್ತದೆ.

ನಿಮ್ಮ ಫೋನ್‌ನ ಲೊಕೇಶನ್ ಯಾವಾಗಲೂ ಆನ್ ಆಗಿದ್ದರೆ, ಯಾವುದೇ ಮೂರನೇ ವ್ಯಕ್ತಿಯ ಅಪ್ಲಿಕೇಶನ್ ಅದರ ಲಾಭವನ್ನು ಪಡೆಯಬಹುದು. ಆದ್ದರಿಂದ ಅಗತ್ಯವಿದ್ದಾಗ ಮಾತ್ರ ಅದನ್ನು ಆನ್ ಮಾಡಿ.ವಿಮಾನ ನಿಲ್ದಾಣಗಳು, ಮಾಲ್‌ಗಳು ಮತ್ತು ಕೆಫೆಗಳಂತಹ ಸ್ಥಳಗಳಲ್ಲಿ ಉಚಿತ ವೈ-ಫೈ ಲಭ್ಯವಿದೆ . ಅವುಗಳಿಗೆ ಸಂಪರ್ಕಿಸಲು ಎಂದಿಗೂ ಪ್ರಯತ್ನಿಸಬೇಡಿ. ಸಾರ್ವಜನಿಕ ನೆಟ್‌ವರ್ಕ್‌ಗಳಲ್ಲಿ ಬ್ಯಾಂಕಿಂಗ್ ವಹಿವಾಟುಗಳು ಅಥವಾ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವುದರಿಂದ ಅವು ಸೋರಿಕೆಯಾಗುವ ಅಪಾಯ ಹೆಚ್ಚಾಗುತ್ತದೆ.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries