HEALTH TIPS

ಹಸಿರು ಇಂಧನ ಉತ್ಪಾದನೆಯತ್ತ ಭಾರತೀಯ ರೈಲ್ವೆ: ಹಳಿಗಳ ನಡುವೆ 70 ಮೀ. ಸೌರ ಫಲಕ

ಬನಾರಸ್: ಉತ್ತರ ಪ್ರದೇಶದ ವಾರಾಣಸಿಯಲ್ಲಿರುವ ಬನಾರಸ್‌ ಲೋಕೋಮೋಟಿವ್ ವರ್ಕ್ಸ್‌ (BLW) ವತಿಯಿಂದ ಹಳಿಗಳ ನಡುವೆ 70 ಮೀಟರ್ ಉದ್ದದ ಸೌರಶಕ್ತಿ ಉತ್ಪಾದನಾ ಫಲಕಗಳನ್ನು ಭಾರತೀಯ ರೈಲ್ವೆ ಅಳವಡಿಸಿದೆ. ಹಸಿರು ಇಂಧನ ಸುಸ್ಥಿರ ರೈಲು ಸಾಗಣೆ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಡಲಾಗಿದೆ ಎಂದು ರೈಲ್ವೆ ಸಚಿವಾಲಯ ಹೇಳಿದೆ.

ಒಟ್ಟು 28 ಪ್ಯಾನಲ್‌ಗಳಿರುವ ಈ ಸೌರ ಫಲಕವು 15 ಕಿಲೋ ವಾಟ್‌ ಶಕ್ತಿ ಉತ್ಪಾದನೆಯ ಸಾಮರ್ಥ್ಯ ಹೊಂದಿದೆ. ಆ. 10ರಂದು ಭುಜ್‌ ಮತ್ತು ನಲಿಯಾ ವಿಭಾಗದ ಸನೋಸಾರಾಯಿಂದ ದಾಹೇಜ್ ಕಡೆಗೆ ಮೊದಲ ಕೈಗಾರಿಕಾ ಉಪ್ಪಿನ ಸರಕು ರೇಕ್‌ ಪ್ರಯಾಣಿಸಿತು. 3,851 ಟನ್‌ ಉಪ್ಪನ್ನು ಹೊತ್ತ ರೈಲು ಒಟ್ಟು 673.57 ಕಿ.ಮೀ. ಕ್ರಮಿಸಿತು. ಇದರಿಂದ ರೇಲ್ವೆ ಇಲಾಖೆಗೆ ₹31.69 ಲಕ್ಷ ಆದಾಯ ಬಂದಿದೆ. ಇದು ಉಪ್ಪಿನ ಕೈಗಾರಿಕೆಗೆ ಹೊಸ ದಾರಿಯನ್ನು ಸಿದ್ಧಪಡಿಸಿದೆ' ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ನಾಗ್ದಾ-ಖಾಚ್ರೋಡ್‌ ಮಾರ್ಗದಲ್ಲಿ ದೇಶದ ಮೊದಲ 2×25 ಕಿಲೋ ವಾಟ್‌ ಎಲೆಕ್ಟ್ರಿಕ್‌ ಟ್ರಾಕ್ಷನ್‌ ವ್ಯವಸ್ಥೆಗೆ ಪಶ್ಚಿಮ ರೇಲ್ವೆ ರತ್ನಲಂ ವಿಭಾಗ ಚಾಲನೆ ನೀಡಿತು. ಇದರಲ್ಲಿ ಎರಡು ಸ್ಕಾಟ್-ಕನೆಕ್ಟೆಡ್ 100 MVA ಪವರ್ ಟ್ರಾನ್ಸ್‌ಫಾರ್ಮರ್‌ಗಳು ಸೇರಿದ್ದು, ಓವರ್‌ಹೆಡ್ ಎಕ್ವಿಪ್‌ಮೆಂಟ್‌ಗೆ ಶಕ್ತಿ ಪೂರೈಕೆ ಮಾಡಲಾಗಿದೆ. ನಾಗ್ದಾ ಟ್ರಾಕ್ಷನ್ ಸಬ್‌ಸ್ಟೇಷನ್ ಭಾರತದಲ್ಲಿ ಮೊದಲ ಬಾರಿಗೆ ಸ್ಕಾಟ್ ಟ್ರಾನ್ಸ್‌ಫಾರ್ಮರ್ ತಂತ್ರಜ್ಞಾನದಿಂದ ವಿದ್ಯುದೀಕರಣಗೊಂಡಿದೆ ಎಂಬುದೂ ವಿಶೇಷ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries