ದೀರ್ ಅಲ್-ಬಲಾಹ್: ಗಾಜಾ ಪಟ್ಟಿ ಮೇಲೆ ಇಸ್ರೇಲ್ ಪಡೆಗಳು ಶನಿವಾರ ನಡೆಸಿದ ಗುಂಡಿನ ದಾಳಿಯಲ್ಲಿ 18ಕ್ಕೂ ಹೆಚ್ಚಿನ ಪ್ಯಾಲೆಸ್ಟೀನಿಯರು ಮೃತಪಟ್ಟಿದ್ದಾರೆ. ಅಪೌಷ್ಟಿಕತೆ ಸಂಬಂಧಿತ ಕಾರಣಗಳಿಂದಾಗಿ ಕಳೆದ 24 ಗಂಟೆಗಳಲ್ಲಿ 7 ಪ್ಯಾಲೆಸ್ಟೀನಿಯರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯ ಶನಿವಾರ ಹೇಳಿದೆ.
ಆಗ್ರಹ: ಹಮಾಸ್ ಬಂಡುಕೋರರ ಒತ್ತೆಯಾಳಾಗಿ ಇರಿಸಿಕೊಂಡಿರುವ ತಮ್ಮವರ ಬಿಡುಗಡೆಗೆ ಸಂಬಂಧಿಸಿ, ತ್ವರಿತವಾಗಿ ಒಪ್ಪಂದ ಮಾಡಿಕೊಳ್ಳಬೇಕು ಎಂದು ಅವರ ಕುಟುಂಬಸ್ಥರು ಟೆಲ್ ಅವಿವ್‌ನಲ್ಲಿ ಪ್ರತಿಭಟಿಸಿದರು.
ಈ ವಾರದ ಆರಂಭದಲ್ಲಿ ಹಮಾಸ್ ಬಂಡುಕೋರರು ಒತ್ತೆಯಾಳುಗಳ ವಿಡಿಯೊ ತುಣುಕುಗಳನ್ನು ಬಿಡುಗಡೆ ಮಾಡಿದ್ದರು.




