ಬದಿಯಡ್ಕ: ನೀರ್ಚಾಲು ಶ್ರೀವಿಘ್ನೇಶ್ವರ ಯಕ್ಷಗಾನ ಕಲಾಸಂಘದ ಆಶ್ರಯದಲ್ಲಿ ಆ.24 ರಂದು ಭಾನುವಾರ ಅಪರಾಹ್ನ 2 ರಿಂದ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆ ವಠಾರದಲ್ಲಿ ಮಳೆಗಾಲದ ಮಹೋನ್ನತ ಯಕ್ಷಗಾನ ತಾಳಮದ್ದಳೆ ಕಚ-ದೇವಯಾನಿ ಅಗ್ರಮಾನ್ಯ ಕಲಾವಿದರ ಕುಡುವಿಕೆಯಲ್ಲಿ ನಡೆಯಲಿದೆ.
ಸಮಾರಂಭವನ್ನು ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ದೀಪ ಬೆಳಗಿಸಿ ಉದ್ಘಾಟಿಸುವರು. ಬಳಿಕ ನಡೆಯುವ ತಾಳಮದ್ದಳೆಯ ಹಿಮ್ಮೇಳದಲ್ಲಿ ಹೊಸಮೂಲೆ ಗಣೇಶ್ ಭಟ್, ತಲ್ಪನಾಜೆ ವೆಂಕಟ್ರಮಣ ಭಟ್, ಉದಯ ಕಂಬಾರ್, ಲವಕುಮಾರ ಐಲ ಭಾಗವಹಿಸುವರು. ಮುಮ್ಮೇಳದಲ್ಲಿ ಉಜಿರೆ ಅಶೋಕ ಭಟ್, ರಾಧಾಕೃಷ್ಣ ಕಲ್ಚಾರ್, ಪವನ್ ಕಿರಣ್ಕೆರೆ, ಸದಾಶಿವ ಆಳ್ವ ತಲಪಾಡಿ, ಬಾಲಕೃಷ್ಣ ಆಚಾರ್ಯ ನೀರ್ಚಾಲು ಪಾತ್ರಗಳಿಗೆ ಜೀವ ತುಂಬುವರು.




