ಪೆರ್ಲ: ಪೆರ್ಲ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ 54ನೇ ವರ್ಷದ ಗಣೇಶೋತ್ಸವ ಆ. 27ಹಾಗೂ 28ರಂದು ಪೆರ್ಲ ಶ್ರೀ ಸತ್ಯನಾರಾಯಣ ಮಂದಿರದಲ್ಲಿ ಜರುಗಲಿದೆ. 27ರಂದು ಬೆಳಗ್ಗೆ 8ಕ್ಕೆ ಗಣಪತಿ ಪ್ರತಿಷ್ಠೆ, ವೇದಘೋಷ, ಧ್ವಜಾರೋಹಣದೊಂದಿಗೆ ಕಾರ್ಯಕ್ರಮ ಆರಂಭಗೊಳ್ಳುವುದು. 10.30ಕ್ಕೆ ವಿವಿಧ ಸ್ಪರ್ಧೆಗಳು, ಮಧ್ಯಾಹ್ನ 2ರಿಂದ ನಾದ ಸಿಂಚನ ಭಕ್ತಿ ಸಂಗೀತ, ಸಂಜೆ 5ಕ್ಕೆ ಧಾರ್ಮಿಕ ಸಭೆ ನಡೆಯುವುದು. ಸುಧೀರ್‍ಕುಮಾರ್ ಶೆಟ್ಟಿ ಎಣ್ಮಕಜೆ ಅಧ್ಯಕ್ಷತೆ ವಹಿಸುವರು. ಚಿಂತಕ, ಉಪನ್ಯಾಸಕ, ದೈವನರ್ತನ ಕಲಾವಿದ ಡಾ. ರವೀಶ್ ಪಡುಮಲೆ ಧಾರ್ಮಿಕ ಭಾಷಣ ಮಾಡುವರು. ರಾತ್ರಿ 8ಕ್ಕೆ ಅಂತಾರಾಷ್ಟ್ರೀಯ ಖ್ಯಾತಿಯ ಗಾಯಕಿ ಕುಮಾರಿ ಸೂರ್ಯಗಾಯತ್ರಿ ಅವರಿಂದ'ಸೂರ್ಯ ಸಂಗೀತಂ'ಕಾರ್ಯಕ್ರಮ ಜರುಗಲಿದೆ.
ಆ. 28ರಂದು ಬೆಳಗ್ಗೆ 7.45ಕ್ಕೆ ಗಣಪತಿ ಹೋಮ, ವಿವಿಧ ಸ್ಪರ್ಧೆಗಳು, ಮಧ್ಯಾಹ್ನ 3ಕ್ಕೆ ಶ್ರೀಗಣಪತಿ ವಿಗ್ರಹದ ಭವ್ಯ ಶೋಭಾಯಾತ್ರೆ ನಡೆಯುವುದು.

