ಮಧೂರು: ಕುಂಬಳೆ ಸೀಮೆಯ ಪ್ರಸಿದ್ಧ ನಾಲ್ಕು ದೇವಾಲಯಗಳಲ್ಲಿ ಒಂದಾಗಿರುವ ಮಧೂರು ಶ್ರೀಮದನಂತೆಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಶ್ರೀ ವಿನಾಯಕ ಚತುರ್ಥಿ ಉತ್ಸವ ಆಗಸ್ಟ್ 27ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.
ಅಣದು ಬೆಳಗ್ಗೆ 7ಕ್ಕೆ ವಿಶೇಷ ಗಣಪತಿ ಹವನ ಆರಂಭಗೊಮಡು 8ಕ್ಕೆ ವಿಶೇಷ ಗಣಪತಿ ಹವನದ ಪೂರ್ಣಹುತಿ ನಡೆಯುವುದು. ಬೆಳಿಗ್ಗೆ 10ಕ್ಕೆ ಭಜನೆ, ಮದ್ಯಾಹ್ನ 12.30 ಕ್ಕೆ ಮಹಾ ಪೂಜೆ. 1 ಗಂಟೆಯಿಂದ ಪ್ರಸಾದ ಭೋಜನ ನಡೆಯುವುದು.29ರಂದು ನವಾನ್ನ:
ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ದೇಗುಲ ತುಂಬಿಸುವ ಹಾಗೂ ನವಾನ್ನ ಕಾರ್ಯಕ್ರಮ ಆ. 29ರಂದು ಬೆಳಗ್ಗೆ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ.

