ಮುಂಬೈ: ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಗರ ಮಂಖುರ್ದ್‌ನಲ್ಲಿ ಮೊಸರು ಕುಡಿಕೆ ಕಟ್ಟುವಾಗ 32 ವರ್ಷದ ಜಗಮೋಹನ್ ಶಿವಕಿರಣ್ ಚೌಧರಿ ಎಂಬ ವ್ಯಕ್ತಿ ಬಿದ್ದು ಸಾವಿಗೀಡಾಗಿದ್ದಾರೆ.
ಮಾನವ ಪಿರಮಿಡ್ ಮೂಲಕ ಮೊಸರು ಕುಡಿಕೆ ಒಡೆಯುವುದು ವಾಡಿಕೆಯಾಗಿತ್ತು.
ಅದಕ್ಕೂ ಮೊದಲು ಜಗಮೋಹನ್ ಶಿವಕಿರಣ್ ತನ್ನ ಮನೆಯ ಮೊದಲ ಮಹಡಿಯ ಕಿಟಕಿಯ ಗ್ರಿಲ್‌ನಿಂದ ಹಗ್ಗಕ್ಕೆ ಮೊಸರು ಕುಡಿಕೆ ಕಟ್ಟುವಾಗ ಯುವಕ ಆಯಾ ತಪ್ಪಿ ಕೆಳಗೆ ಬಿದ್ದಿದ್ದಾರೆ.
ಕೂಡಲೇ ಅವರನ್ನು ಸ್ಥಳೀಯರು ಶತಾಬ್ದಿ ಗೋವಂಡಿ ಆಸ್ಪತ್ರೆಗೆ ದಾಖಲಿಸಿದರು. ಚಿಕಿತ್ಸೆಗೆ ಸ್ಪಂದಿಸದೆ ಯುವಕ ಮೃತ ಪಟ್ಟಿದ್ದಾರೆಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.




