HEALTH TIPS

ಕೇರಳ ರಾಜಧಾನಿಯಲ್ಲಿ ಮೆರುಗು ನೀಡಿದ ಅನಂತಪುರಿ ಗಡಿನಾಡ ಕನ್ನಡ ಸಂಸ್ಕøತಿ ಉತ್ಸವ

ತಿರುವನಂತಪುರ: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರ್ಕಾರ, ಭಾರತ್ ಭವನ ತಿರುವನಂತಪುರ ಕೇರಳ ಸರ್ಕಾರಗಳ ಆಶ್ರಯದಲ್ಲಿ ಅನಂತಪುರಿ ಗಡಿನಾಡ ಕನ್ನಡ ಸಂಸ್ಕøತಿ ಉತ್ಸವ 2025 ಶನಿವಾರ ಬೆಳಗ್ಗೆ ಕೇರಳ ರಾಜ್ಯ ರಾಜಧಾನಿಯಲ್ಲಿ ಜರಗಿತು. ತಿರುವನಂತರಪುರ ಸಿವಿ ರಾಮನ್ ಪಿಳ್ಳೆ ರಸ್ತೆ ತೈಕಾಡ್ ಭಾರತ್ ಭವನದಲ್ಲಿ ಜರಗಿದ ಕಾರ್ಯಕ್ರಮವನ್ನು ಕೇರಳ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಿ.ಆರ್. ಅನಿಲ್ ದೀಪಬೆಳಗಿಸಿ ಉದ್ಘಾಟಿಸಿದರು. ಅವರು ಮಾತನಾಡಿ, ಬಹುಭಾಷೆಯಿಂದ ಕೂಡಿದ ಸಂಸ್ಕøತಿಯನ್ನು ಹೊಂದಿರುವ ಜಿಲ್ಲೆ ಕಾಸರಗೋಡು. ಅಲ್ಲಿಂದ ಬಂದು ರಾಜಧಾನಿಯಲ್ಲಿ ಇಂತಹ ಕಾರ್ಯಕ್ರಮವನ್ನು ನಡೆಸಿಕೊಡುತ್ತಿರುವುದು ಶ್ಲಾಘನೀಯ. ಮನುಷ್ಯ ಜಾತಿಯಲ್ಲಿರುವ ನಾವೆಲ್ಲ ಒಂದೇ ಎಂಬ ಭಾವನೆ ಎಲ್ಲರಲ್ಲಿರಬೇಕು. ಸಂಪೂರ್ಣ ಸಾಕ್ಷರತೆಯನ್ನು ಹೊಂದಿದ ರಾಜ್ಯದಲ್ಲಿ ಇಂದು 105 ವರ್ಷದ ವ್ಯಕ್ತಿಯೂ ಆಧುನಿಕ ಕಾಲಕ್ಕೆ ಒಗ್ಗಿಗೊಂಡಿದ್ದಾರೆ ಎಂದು ಶುಭಹಾರೈಸಿದರು. 


ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಕಾಸರಗೋಡು ಇದರ ಸಂಸ್ಥಾಪಕ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಸಾಧಕರನ್ನು ಗೌರವಿಸಿ ಮಾತನಾಡಿ, ಧರ್ಮ ಬೆಳಕಾದರೆ ನಾಡಿಗೂ ವಿಶ್ವಕ್ಕೂ ಬೆಳಕನ್ನು ನೀಡಲಿದೆ. ತೌಳವ ಸಂಸ್ಕøತಿಯಲ್ಲಿ ಆರಾಧಿಸಿಕೊಂಡು ಬರುತ್ತಿರುವ ಅನಂತಪದ್ಮನಾಭನ ಮಣ್ಣಿನಲ್ಲಿ ಕನ್ನಡಕ್ಕೆ ಶಕ್ತಿತುಂಬುವ ಕೆಲಸ ನಡೆಯುತ್ತಿದೆ. ಅನಂತಪುರಿಯಲ್ಲಿ ಕನ್ನಡದ ಧ್ವನಿ ಹೊರಡುತ್ತಿದೆ. ಭಾಷೆಗಳ ಸಂಸ್ಕøತಿಗೆ ಗಡಿ ಎಂಬುದಿಲ್ಲ. ಮಾತೃಸಂಸ್ಕøತಿಯೇ ನಮ್ಮ ಬದುಕು ಎಂದು ಅವರು ತಿಳಿಸಿದರು. 

ಕರ್ನಾಟಕ ಸರ್ಕಾರದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾವೈಕ್ಯದ ನಾಡಿನಲ್ಲಿ ನಾವಿದ್ದೇವೆ. ಇತಿಹಾಸವನ್ನು ಓದಿದವರಿಗೆ ಮಾತ್ರ ಇತಿಹಾಸವನ್ನು ಬರೆಯಲು ಸಾಧ್ಯವಿದೆ. ಕನ್ನಡವನ್ನು ಉಳಿಸಬೇಕು, ಬೆಳೆಸಬೇಕು ಎನ್ನುವ ಉದ್ದೇಶ ಕಾರ್ಯಕ್ರಮದ ಹಿಂದೆ ಇದೆ. ಕನ್ನಡ ಶಾಲೆಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ಪ್ರಾಧಿಕಾರವು ಮುಂದುವರಿಯುತ್ತಿದೆ. ಶಾಲೆಗಳಿಗೆ ಕನ್ನಡ ದಿನಪತ್ರಿಕೆ, ಪುಸ್ತಕಗಳನ್ನು ವಿತರಿಸಲು ಯೋಜನೆಯಿದೆ ಎಂದರು. 

ಭಾರತ್ ಭವನ್ ಸದಸ್ಯ ಕಾರ್ಯದರ್ಶಿ ಪ್ರಮೋದ್ ಪಯ್ಯನ್ನೂರು, ಭಾರತ್ ಭಾರತಿಯ ಸಾಧನಾ ರಾವ್, ಹಿರಿಯ ವಿದ್ವಾಂಸ ಸಂಶೋಧಕ ಡಾ.ವೀರಣ್ಣ ತುಪ್ಪದ ಹುಮಾನಾಬಾದ್ ಬೀದರ್, ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಶಿವರೆಡ್ಡಿ ಬ್ಯಾಡೇದ, ತಿರುವನಂತಪುರ ಕರ್ನಾಟಕ ಸಂಘದ ಕಾರ್ಯದರ್ಶಿ ಡಾ. ಅನಿತ ಕುಮಾರಿ ಹೆಗಡೆ, ಧಾರ್ಮಿಕ ಮುಂದಾಳು ಅರಿಬೈಲು ಗೋಪಾಲ ಶೆಟ್ಟಿ ಕಾಸರಗೋಡು, ಸಮಾಜಸೇವಕ ಮಂಜುನಾಥ ಆಳ್ವ ಮಡ್ವ, ನಿವೃತ್ತ ಅಂಡರ್ ಸೆಕ್ರಟೆರಿ ಕೇರಳ ಲೋಕಸೇವಾ ಆಯೋಗದ ಗಣೇಶ್ ಪ್ರಸಾದ್ ಪಾಣೂರು, ಅನಂತಪುರಿ ಗಡಿನಾಡ ಸಾಂಸ್ಕøತಿಕ ಉತ್ಸವದ ಪ್ರಧಾನ ಸಂಚಾಲಕ ಎ.ಆರ್. ಸುಬ್ಬಯ್ಯಕಟ್ಟೆ, ಪ್ರೊ.ಎ. .ಶ್ರೀನಾಥ್, ವಕೀಲ ಎಂ.ಎಸ್. ಥೋಮಸ್ ಡಿ.ಸೋಜ, ಝಡ್ ಎ. ಕಯ್ಯಾರು, ರಾಧಾಕೃಷ್ಣ ಕೆ.ಉಳಿಯತ್ತಡ್ಕ ಪಾಲ್ಗೊಂಡಿದ್ದರು. ಲೇಖಕ ಪತ್ರಕರ್ತ ರವಿ ನಾಯ್ಕಾಪು ನಿರೂಪಪಿಸಿದರು. ಕಾಸರಗೋಡು ಗಸಾಸಾ ಅಕಾಡೆಮಿಯ ಕಾರ್ಯದರ್ಶಿ ಅಖಿಲೇಶ್ ನಗುಮುಗಂ ಸ್ವಾಗತಿಸಿ, ಅಧ್ಯಕ್ಷ ಎನ್.ಚನಿಯಪ್ಪ ನಾಯ್ಕ ವಂದಿಸಿದರು. ಬಹುಭಾಷಾ ಕವಿಸಂಗಮ, ವಿಚಾರಗೋಷ್ಠಿ ನಡೆಯಿತು.

ಸಾಧಕರಿಗೆ ಗೌರವ ಸನ್ಮಾನ:

ಸಾಂಸ್ಕøತಿಕ ಸಂಘಟಕ ಜೇಮ್ಸ್ ಮೆಂಡೋನ್ಸಾ ದುಬೈ, ನಾಟಕ ಸಿನೆಮಾ ನಿರ್ಮಾಪಕ ಸಂಘಟಕ ಲಯನ್ ಕಿಶೋರ್ ಡಿ.ಶೆಟ್ಟಿ, ತುಳುಸಂಶೋಧಕ ಎಲ್.ಆರ್.ಪೋತಿ ತಿರುವನಂತಪುರ, ಶೈಕ್ಷಣಿಕ ಕ್ಷೇತ್ರದಲ್ಲಿ ರಾಘವ ಚೇರಾಲ್, ಹೊರರಾಷ್ಟ್ರ ಕನ್ನಡ ಸಂಘಟನೆ ಶಿವಾನಂದ ಕೋಟ್ಯಾನ್ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ಪುಸ್ತಕ ಬಿಡುಗಡೆ :

ರಾಜನ್ ಮುನಿಯೂರು ಅವರು ಬರೆದ ಪುಸ್ತಕ ತುಳುನಾಡನ್ ತುಡಿಪ್ಪುಕ್ಕಳ್ ಕೃತಿಯನ್ನು ಸಚಿವ ಜಿ.ಆರ್.ಅನಿಲ್ ಬಿಡುಗಡೆಗೊಳಿಸಿದರು.

ಡಾ. ನಾಗೇಶ್ ಮತ್ತು ನಾಗರಾಜ ಬೆಂಗಳೂರು ತಂಡದ ನೇತೃತ್ವದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ಜರಗಿತು. ವೀರಗಾಸೆ, ಚಿಲಿಪಿಲಿ ಕುಣಿತ, ಜಾನಪದ ನೃತ್ಯ, ಶಾಸ್ತ್ರೀಯ ನೃತ್ಯ, ಕಥಕ್ ನೃತ್ಯ, ಮೋಹಿನಿಯಾಟ್ಟಂ, ಯಕ್ಷಗಾನ, ಕಥಕ್ಕಳಿಯು ಕೇರಳದ ರಾಜಧಾನಿ ತಿರುವನಂತಪುರದಲ್ಲಿ ಜನಮನಸೂರೆಗೊಂಡಿತು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries