ಉಪ್ಪಳ: ಶ್ರೀಕೃಷ್ಣ ಪರಮಾತ್ಮನ ಆದರ್ಶ ಹಾಗೂ ಸತ್ವಯುತ ಗುಣಗಳು ಸರ್ವವ್ಯಾಪಿಯಾಗಿವೆ. ಅರ್ಜುನನಿಗೆ ಶ್ರೀಕೃಷ್ಣ ಬೋಧಿಸಿದ ಸಂದೇಶವು ಭಗವದ್ಗೀತೆ ಎಂಬ ಶ್ರೇಷ್ಠ ಗ್ರಂಥವಾಗಿದೆ. ಶ್ರೀಕೃಷ್ಣನು ಜಗದ್ಗುರುವಾಗಿದ್ದು ನಾಡಿನ ಉದ್ಧಾರಕ್ಕೆ ನಿರಂತರ ಶ್ರಮಿಸಿದ್ದನು. ಅಲ್ಲದೆ ತತ್ವ ಸಿದ್ಧಾಂತಗಳು ಎಂದೆಂದಿಗೂ ಪ್ರಸ್ತುತವಾಗಿವೆ ಎಂದು ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥೆ ಪ್ರೊ.ಸುಜಾತ ಎಸ್. ಹೇಳಿದ್ದಾರೆ.
ಕಯ್ಯಾರು ಪರಂಬಳ ಕಯ್ಯಾರು ಶ್ರೀ ಭಾರತ ಮಾತಾ ಸೇವಾ ಟ್ರಸ್ಟ್‍ನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ 21ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಅವರು ಧಾರ್ಮಿಕ ಭಾಷಣ ಮಾಡಿದರು.
ಶ್ರೀ ಭಾರತ ಮಾತಾ ಸೇವಾ ಟ್ರಸ್ಟ್, ಸಂಘ ಶಕ್ತಿ, ವಿಶ್ವ ಹಿಂದೂ ಪರಿಷತ್, ಬಜರಂಗ ದಳ, ಮಾತೃಮಂಡಳಿ, ದುರ್ಗಾವಾಹಿನಿ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ಸಮಿತಿ ಪರಂಬಳ ಕಯ್ಯಾರು ಇವುಗಳ ಆಶ್ರಯದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸಭೆಯಲ್ಲಿ ಜಗನ್ನಾಥ ಶೆಟ್ಟಿ ಪಾವಳಗುತ್ತು ವರ್ಕಾಡಿ ಅಧ್ಯಕ್ಷತೆ ವಹಿಸಿದ್ದರು. ವಿವಿಧ ವಲಯಗಳ ಪ್ರಮುಖರಾದ ಬಾಲಕೃಷ್ಣ ಶೆಟ್ಟಿ ಪಾವಳಗುತ್ತು ವರ್ಕಾಡಿ, ವಿಠಲ ಶೆಟ್ಟಿ ಕುದ್ವ ಪೆರ್ಲ, ಶಿವಪ್ರಸಾದ್ ಸಿ. ಮಂಡೆಕಾಪು, ರಾಜೀವಿ ಶೆಟ್ಟಿಗಾರ್ ಕಯ್ಯಾರು, ಡಾ.ಜಯಪ್ರಕಾಶ್ ನಾರಾಯಣ ತೊಟ್ಟಿತ್ತೋಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಗಿರೀಶ್ ಕುಮಾರ್ ಕಯ್ಯಾರು, ಜಯಶಂಕರ ಕಯ್ಯಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಿ.ವಿಷ್ಣು ಆಚಾರ್ಯ ಧರ್ಮತ್ತಡ್ಕ ಅವರನ್ನು ಸನ್ಮಾನಿಸಲಾಯಿತು. 2024-25ನೇ ಶೈಕ್ಷಣಿಕ ವರ್ಷದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಎ ಪ್ಲಸ್ ಗ್ರೇಡ್ ಪಡೆದ ವಿದ್ಯಾರ್ಥಿನಿಯರಾದ ದೀಪ್ತಿ ಕುಂಟಂಗೇರಡ್ಕ ಮತ್ತು ಪ್ರತೀಕ್ಷಾ ಬಾಯಾಡಿ ಅವರನ್ನು ಪುರಸ್ಕರಿಸಲಾಯಿತು. ಮಹೇಶ್ ಬಿ.ಸಿ.ರೋಡ್ ಹೇರೂರು ಪ್ರಾರ್ಥನೆ ಹಾಡಿದರು. ಗಣೇಶ್ ಪೆÇನ್ನೆತ್ತೋಡು ಕಯ್ಯಾರು ಸ್ವಾಗತಿಸಿ, ವಂದಿಸಿದರು. ಸುಬ್ರಹ್ಮಣ್ಯ ಭಟ್ ಪೆರಿಯಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.
ರಾಧಾ-ಕೃಷ್ಣ ವೇಷ ಪ್ರದರ್ಶನ ಮತ್ತು ನೃತ್ಯ
ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮಗಳ ಉದ್ಘಾಟನೆ, ಸ್ಥಳೀಯರಿಂದ ಭಜನೆ, ರಾಧಾ- ಕೃಷ್ಣ ವೇಷ ಪ್ರದರ್ಶನ ಹಾಗೂ ನೃತ್ಯ, ಮಡಿಕೆ ಒಡೆಯುವುದು, ಹಗ್ಗಜಗ್ಗಾಟ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆದವು. ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.




.jpg)
.jpg)
