ಬದಿಯಡ್ಕ: ಕುಂಬ್ಡಾಜೆ ಎರಡನೇ ಮೈಲ್ ತೊಟ್ಟಿ ನಿವಾಸಿ ಕೆ. ಅಭಿಲಾಷ್ ಎಂಬವರ ಮನೆಗೆ ಅತಿಕ್ರಮಿಸಿ ನುಗ್ಗಿ ಕಿಟಿಕಿ ಗಾಜಿಗೆ ಹಾನಿಯೆಸಗಿದ ಪ್ರಕರಣಕ್ಕೆ ಸಂಬಂಧಿಸಿ ನೆರೆಮನೆ ನಿವಾಸಿ ಪ್ರಶಾಂತ್ ಯಾನೆ ಕುಟ್ರು ಎಂಬಾತನ ವಿರುದ್ಧ ಬದಿಯಡ್ಕ ಠಾಣೆ ಪೊಲೀಸರರು ಕೇಸು ದಾಖಲಿಸಿಕೊಂಡಿದ್ದಾರೆ. ಮರದ ಸಲಾಕೆಯೊಂದಿಗೆ ಆಗಮಿಸಿ ಸೋಮವಾರ ರಾತ್ರಿ ಮನೆಯ ಕಿಟಿಕಿ, ಬಾಗಿಲಿಗೆ ಹಾನಿಯೆಸಗಿರುವುದಾಗಿ ಅಭಿಲಾಷ್ ನೀಡಿದ ದುರಿನಲ್ಲಿ ತಿಳಿಸಿದ್ದಾರೆ. ತನ್ನ ಪತ್ನಿಗೆ ಉಪಟಳ ನೀಡಿರುವ ಬಗ್ಗೆ ಪ್ರಶಾಂತ್ ವಿರುದ್ಧ ಈ ಹಿಂದೆ ಅಭಿಲಾಷ್ ಪೊಲೀಸರಿಗೆ ದೂರು ನೀಡಿದ್ದ ದ್ವೇಷದಲ್ಲಿ ಕೃತ್ಯವೆಸಗಿರಬೇಕೆಂದು ಸಂಶಯಿಸಲಾಗಿದೆ. ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.




