ಬದಿಯಡ್ಕ: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿಯ ನೀರ್ಚಾಲು ಘಟಕದ ವಾರ್ಷಿಕ ಮಹಾಸಭೆ ಗುರುವಾರ ಅಪರಾಹ್ನ ನೀರ್ಚಾಲು ವ್ಯಾಪಾರ ಭವನದಲ್ಲಿ ಜರಗಿತು.
ಕೆ.ವಿ.ವಿ.ಇ.ಎಸ್. ಕಾಸರಗೋಡು ಜಿಲ್ಲಾ ಅಧ್ಯಕ್ಷ ಕೆ.ಅಹಮ್ಮದ್ ಶರೀಫ್ ಉದ್ಘಾಟಿಸಿ ಮಾತನಾಡಿ, ವ್ಯಾಪಾರಿಗಳ ಸುರಕ್ಷತೆಗೆ, ಕುಟುಂಬಕ್ಕೆ ಆಧಾರವಾಗಿ ಸಂಘಟನೆಯ ಯೋಜನೆಗಳು ಸಾಕಷ್ಟಿವೆ. ಇದರ ಸದುಪಯೋಗಪಡಿಸಿಕೊಳ್ಳುವುದು ಪ್ರತಿಯೊಬ್ಬ ಸದಸ್ಯನ ಕರ್ತವ್ಯವಾಗಿದೆ. ಸಂಘಟನೆಯು ವ್ಯಾಪಾರಿಗಳಿಗೆ ಮಾನಸಿಕ ಧೈರ್ಯವನ್ನು ನೀಡುತ್ತದೆ ಎಂದರು.
ನೀರ್ಚಾಲು ಘಟಕದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ರವಿ ನೀರ್ಚಾಲು ವಾರ್ಷಿಕ ವರದಿ ಹಾಗೂ ಕೋಶಾಧಿಕಾರಿ ಗೋಪಾಲ ಬಿ. ವಾರ್ಷಿಕ ಆಯ ವ್ಯಯ ಮಂಡಿಸಿದರು. ಜಿಲ್ಲಾ ಕಾರ್ಯದರ್ಶಿಗಳಾದ ಕೆ.ವಿ.ದಾಮೋದರನ್, ದಿನೇಶ್, ಮುಹಮ್ಮದ್ ಕುಂಞÂ ಹಾಜಿ ಕುಂಜಾರು ಶುಭಾಶಂಸನೆಗೈದರು. ಕಾರ್ಯದರ್ಶಿ ರವಿ ನೀರ್ಚಾಲು ಸ್ವಾಗತಿಸಿ, ಉಪಾಧ್ಯಕ್ಷ ಸತ್ಯಶಂಕರ ಭಟ್ ವಂದಿಸಿದರು. ಅಂಗಡಿಗಳನ್ನು ಮುಚ್ಚಿ ಅಪರಾಹ್ನ ವ್ಯಾಪಾರಿಗಳು ಮಹಾಸಭೆಯಲ್ಲಿ ಪಾಲ್ಗೊಂಡಿದ್ದರು.





