ಕಾಸರಗೋಡು: ಕಟ್ಟಡದಿಂದ ಬಿದ್ದು ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಹೊಸದುರ್ಗ ವೆಳ್ಳಿಕ್ಕೋತ್ ಪೇರಳ ನಿವಾಸಿ, ವ್ಯಾಪಾರಿ ರೋಯ್ ಜೋಸೆಫ್ ಎಳುಪ್ಲಾಕ್ಕಲ್(45)ಮೃತಪಟ್ಟಿದ್ದಾರೆ. ಮಾವುಂಗಾಲ್ ಮೂಲಕಂಡ ಎಂಬಲ್ಲಿ ತಾನು ಹೊಸದಾಗಿ ನಿರ್ಮಿಸುತ್ತಿರುವ ಮೂರಂತಸ್ತಿನ ಕಟ್ಟಡದ ಮೊದಲ ಮಹಡಿಯಲ್ಲಿದ್ದ ನಿಂತಿದ್ದ ಸಂದರ್ಭ ಕಟ್ಟಡ ಗುತ್ತಿಗೆದಾರ ಪುಲ್ಲೂರ್ ನಿವಾಸಿ ನರೇಂದ್ರನ್ ಎಂಬವರು ರೋಯ್‍ಜೋಸೆಫ್ ಅವರನ್ನು ತಳ್ಳಿದ್ದು, ಇದರಿಂದ ಗಂಭೀರ ಗಾಯಗೊಂಡಿರುವ ಬಗ್ಗೆ ಹೊಸದುರ್ಗ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ನರೇಂದ್ರನ್ ವಿರುದ್ಧ ಪೊಲೀಸರು ಈ ಹಿಂದೆ ದಾಖಲಿಸಿಕೊಂಡಿದ್ದ ಕೇಸನ್ನು, ಉದ್ದೇಶಪೂರ್ವಕವಲ್ಲದ ನರಹತ್ಯೆ ಪ್ರಕರಣವಾಗಿ ದಾಖಲಿಸಿಕೊಮಡು, ಆರೋಪಿಯನ್ನು ಬಂಧಿಸಲಾಗಿದೆ.
ಹೊಸದುರ್ಗ ಮಡಿಯನ್ ಎಂಬಲ್ಲಿ ಅಲ್ಯುಮೀನಿಯಂ ಸಾಮಗ್ರಿ ಮಾರಾಟ ಸಂಸ್ತೆ ನಡೆಸುತ್ತಿರುವ ರಾಯ್‍ಜೋಸೆಫ್, ವ್ಯಾಪಾರವನ್ನು ವಿಸ್ತರಿಸುವ ಉದ್ದೇಶದಿಂದ ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದರು.




