ಕುಂಬಳೆ: ರಾ.ಹೆದ್ದಾರಿ ಕುಂಬಳೆಯಲ್ಲಿ ತಾತ್ಕಾಲಿಕ ಟೋಲ್ ಬೂತ್ ಕಾಮಗಾರಿ ಶನಿವಾರ ಮತ್ತೆ ಪೋಲೀಸ್ ಬಂದೋಬಸ್ತಲ್ಲಿ ಪುನರಾರಂಭಗೊಂಡಿದೆ.ಕುಂಬಳೆ ಠಾಣೆಯ ಇನ್ಸ್‍ಫೆಕ್ಟರ್ ಪಿ.ಕೆ.ಜಿಜೇಶ್ ಅವರ ನೇತೃತ್ವದಲ್ಲಿ ಪೋಲೀಸರ ತಂಡ ಸ್ಥಳದಲ್ಲಿ ಭದ್ರತೆ ಏರ್ಪಡಿಸಿದ್ದರು.
ಗುರುವಾರ ಮಧ್ಯಾಹ್ನ ಹಠಾತ್ತನೆ ಟೋಲ್ ಬೂತ್ ನಿರ್ಮಾಣ ಕಾಮಗಾರಿ ಆರಂಭಿಸಲಾಗಿತ್ತು. ಈ ವೇಳೆ ಜನಪರ ಮುಷ್ಕರ ಸಮಿತಿ ಪದಾಧಿಕಾರಿಗಳು ತಲುಪಿ ಕಾಮಗಾರಿಗೆ ತಡೆಯೊಡ್ಡಿದ್ದರು. ಈ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಪೋಲೀಸರ ಕಾವಲಿನಲ್ಲಿ ಮತ್ತೆ ಕಾಮಗಾರಿ ಆರಂಭಿಸಲಾಗಿತ್ತು. ಈ ವೇಳೆಯೂ ಮುಷ್ಕರ ಸಮಿತಿ ಪದಾಧಿಕಾರಿಗಳು ತಲುಪಿ ಪ್ರತಿಭಟನೆ ನಡೆಸಿ ತಡೆಯೊಡ್ಡಿದ್ದರು. ಬಳಿಕ ಮುಷ್ಕರ ಸಮಿತಿಯ ಆರು ಮಂದಿಯ ವಿರುದ್ದ ಪೋಲೀಸರು ಪ್ರಕರಣ ದಾಖಲಿಸಿ ಬಂದಿಸಿದ್ದರು.
ಇದೇ ವೇಳೆ ಟೋಲ್ ಬೂತ್ ಕಾಮಗಾರಿ 60 ದಿನದೊಳಗೆ ಪೂರ್ಣಗೊಳಿಸಬೇಕೆಂದು ರಾ.ಹೆದ್ದಾರಿ ಪ್ರಾಧಿಕಾರ ಗುತ್ತಿಗೆ ಕಂಪೆನಿಗೆ ನಿರ್ದೇಶಿಸಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಬೆಳಿಗ್ಗೆ ಭಾರೀ ಪೋಲೀಸ್ ಭದ್ರತೆಯಲ್ಲಿ ಕಾಮಗಾರಿ ಪುನರಾರಂಭಿಸಲಾಯಿತು. ಈ ಬಗ್ಗೆ ಮಾಹಿತಿ ತಿಳಿದು ಶನಿವಾರವೂ ಮುಷ್ಕರ ಸಮಿತಿ ಪದಾಧಿಕಾರಿಗಳು ದೌಡಾಯಿಸಿ ಪ್ರತಿಭಟನೆ ನಡೆಸಿದರು. ಪೋಲೀಸರು ಪ್ರತಿಭಟನೆ ನಿರತರನ್ನು ಬಂಧಿಸಿದರು.




.jpg)
.jpg)
.jpg)
