ಮುಳ್ಳೇರಿಯ: ದೇಲಂಪಾಡಿ ಗ್ರಾಮ ಪಂಚಾಯತಿ ಮತ್ತು ಜಿಲ್ಲಾ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ಎಬಿಸಿಡಿ ಶಿಬಿರ ಯೋಜನೆಯ ಪೂರ್ಣಗೊಂಡ ಬಗ್ಗೆ ಶಾಸಕ ಸಿ.ಎಚ್.ಕುಂಞಂಬು ಘೋಷಿಸಿದರು. ಗ್ರಾಮ ಪಂಚಾಯತಿ ಸಭಾ ಭವನದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷೆ ಎ.ಪಿ.ಉಷಾ ವಹಿಸಿದ್ದರು. ಗ್ರಾಮ ಪಂಚಾಯತಿ ಉಪಾಧ್ಯಕ್ಷ ಡಿ.ಎ.ಅಬ್ದುಲ್ಲ ಕುಂಞÂ್ಞ, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರಿಯಾ ಹರೀಶ್, ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಸುರೇಂದ್ರನ್, ಪಂಚಾಯತಿ ಯೋಜನಾ ಸಮಿತಿ ಉಪಾಧ್ಯಕ್ಷ ಎ.ಚಂದ್ರಶೇಖರನ್, ಬ್ಲಾಕ್ ಪಂಚಾಯತಿ ಮಾಜಿ ಉಪಾಧ್ಯಕ್ಷ ಸಿ.ಕೆ.ಕುಮಾರನ್, ಬುಡಕಟ್ಟು ವಿಸ್ತರಣಾಧಿಕಾರಿ ವೀರೇಂದ್ರಕುಮಾರ್, ಅಕ್ಷಯ ಬ್ಲಾಕ್ ಸಂಯೋಜಕಿ ಪುಷ್ಪಾ, ಪಂಚಾಯತಿ ಸದಸ್ಯರಾದ ರಾಧಾಕೃಷ್ಣನ್, ವೆಂಕಟರಮಣ, ದಾಮೋದರನ್, ಪ್ರಮೀಳಾ ಸಿ.ನಾಯಕ್, ರಾಜು ಕೋರಿಕಂಡ ಮಾತನಾಡಿದರು.
ಜನವರಿ 12 ರಂದು ಅಡೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪಂಚಾಯತಿಯಲ್ಲಿರುವ ಪರಿಶಿಷ್ಟ ಪಂಗಡದ ಜನರಿಗೆ ಮೂಲ ದಾಖಲೆಗಳನ್ನು ಒದಗಿಸಲು ಶಿಬಿರವನ್ನು ಆಯೋಜಿಸಲಾಗಿತ್ತು. ಇದರ ಆಧಾರದ ಮೇಲೆ, ಆರು ತಿಂಗಳ ಕಾಲ ನಡೆದ ಕಾರ್ಯಾಚರಣೆಯ ಭಾಗವಾಗಿ ಪಂಚಾಯತಿಯಲ್ಲಿರುವ 530 ಪರಿಶಿಷ್ಟ ಪಂಗಡದ ಜನರಿಗೆ ಮೂಲ ದಾಖಲೆಗಳನ್ನು ಒದಗಿಸಲಾಯಿತು. ಶಿಬಿರದ ಎಲ್ಲಾ ಚಟುವಟಿಕೆಗಳನ್ನು ಮುನ್ನಡೆಸಿದ ಅಕ್ಷಯ ನೌಕರರು ಮತ್ತು ಪರಿಶಿಷ್ಟ ಪಂಗಡದ ಕಾರ್ಯಕರ್ತರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಹಾಯಕ ಪರಿಶಿಷ್ಟ ಪಂಗಡ ಅಭಿವೃದ್ಧಿ ಅಧಿಕಾರಿ ಕೆ.ವಿ. ರಾಘವನ್ ಸ್ವಾಗತಿಸಿ, ಪರಿಶಿಷ್ಟ ಪಂಗಡದ ಕಾರ್ಯಕರ್ತ ಚಂದ್ರಶೇಖರ ವಂದಿಸಿದರು.




.jpg)
