ಬಳಕೆದಾರರ ದೃಷ್ಟಿಯಲ್ಲಿ ಓಪನ್ ಎಐಗೆ ಭಾರತ 2ನೇ ಅತಿ ದೊಡ್ಡ ಮಾರುಕಟ್ಟೆಯಾಗಿದೆ. ದೇಶದಲ್ಲಿ ಮೊದಲ ಕಚೇರಿ ಆರಂಭದೊಂದಿಗೆ ಯುವಜನರನ್ನು ಸೆಳೆಯಲಿದೆ.
ಭಾರತದ ಒಂದು ಶತಕೋಟಿ ಅಂತರ್ಜಾಲ ಬಳಕೆದಾರರನ್ನು ಗುರಿಯಾಗಿಸಿಕೊಂಡಿದೆ. "ಎಲ್ಲರಿಗೂ ಸುಧಾರಿತ ಕೃತಕ ಬುದ್ದಿಮತ್ತೆ ಲಭ್ಯವಾಗಬೇಕು. ಭಾರತದೊಂದಿಗೆ ಕೃತಕ ಬುದ್ದಿಮತ್ತೆಯನ್ನು ರೂಪಿಸಬೇಕು ಎಂಬ ಬದ್ಧತೆಯಿಂದ ಮೊದಲ ಕಚೇರಿಯನ್ನು ತೆರೆಯಲಾಗಿದೆ," ಎಂದು ಓಪನ್ ಎಐನ ಸಿಇಓ ಸ್ಯಾಮ್ ಆಲ್ಬಮನ್ ಹೇಳಿದ್ದಾರೆ. ಭಾರತದಲ್ಲಿ ಚಾಟ್ ಜಿಪಿಟಿಯನ್ನು ವಿದ್ಯಾರ್ಥಿಗಳು ಹೆಚ್ಚು ಬಳಸುತ್ತಿದ್ದಾರೆ.

