ಕಾಸರಗೋಡು: ಎಡನೀರು ಸ್ವಾಮೀಜೀಸ್ ಹೈಯರ್‍ಸೆಕೆಂಡರಿ ಶಾಲೆಯಲ್ಲಿ ಮತದಾನದ ಹಕ್ಕುಗಳ ಜಾಗೃತಿ ತರಗತಿ ನಡೆಸಿತು. ಅಂತಾರಾಷ್ಟ್ರೀಯ ಯುವ ದಿನಾಚರಣೆಯ ಅಂಗವಾಗಿ, ಜಿಲ್ಲಾ ಚುನಾವಣಾ ಇಲಾಖೆ ಮತ್ತು ಎನ್ನೆಸ್ಸೆಸ್ ಘಟಕವು ಚುನಾವಣಾ ಸಾಕ್ಷರತಾ ಕ್ಲಬ್ ಜೊತೆ ಸಹಯೋಗದೊಂದಿಗೆ ಕಾರ್ಯಖ್ರಮ ಆಯೋಜಿಸಲಾಗಿತ್ತು. ಶಾಲಾ ಪ್ರಾಂಶುಪಾಲ ಪ್ರಭಾಕರನ್ ಪಿ ಅಧ್ಯಕ್ಷತೆ ವಹಿಸಿದ್ದರು. ಚುನಾವಣಾ ಇಲಾಖೆಯ ಜಿಲ್ಲಾ ಮುಖ್ಯಸ್ಥ. ಮಾಸ್ಟರ್ ಟ್ರೈನರ್ ಹಾಗೂ ಮಂಜೇಶ್ವರಂ ತಾಲ್ಲೂಕು ಉಪ ತಹಶೀಲ್ದಾರ್ ಅಜಿತ್ ಕುಮಾರ್ ಬಿ ತರಗತಿ ನಡೆಸಿದರು.
ಶಾಲಾ ಶಿಕ್ಷಕ ಮಧುಸೂದನನ್ ಎನ್ ಉಪಸ್ಥಿತರಿದ್ದರು. ಚುನಾವಣಾ ಅಧಿಕಾರಿ ಬಿನುಕುಮಾರ್ ಪಿ ಜಿ, ಮತದಾರರ ಸಹಾಯವಾಣಿ ಮೊಬೈಲ್ ಅಪ್ಲಿಕೇಶನ್ ಬಗ್ಗೆ ಮಾಹಿತಿ ನೀಡಿದರು. ಎನ್‍ಎಸ್‍ಎಸ್ ಕಾರ್ಯಕ್ರಮ ಅಧಿಕಾರಿ ಮತ್ತು ಇಎಲ್‍ಸಿ ಸಂಯೋಜಕ ಡಾ. ಗೋಪೇಶ್ ಜಿ ಕೆ ಸ್ವಾಗತಿಸಿದರು. ಚುನಾವಣಾ ಸಾಕ್ಷರತಾ ಕ್ಲಬ್ ನಾಯಕಿ ದೇವಿಕಾ ಎ ವಂದಿಸಿದರು.


