HEALTH TIPS

ಮೋಟಾರು ವಾಹನ ಇಲಾಖೆಯಲ್ಲಿ ಶಿಸ್ತಿನ ಪಡೆ; ಎಎಂವಿಐಗಳಿಗೆ ಸಮಗ್ರ ತರಬೇತಿ ನೀಡಲಾಗಿದೆ: ಸಚಿವ ಕೆ. ಬಿ. ಗಣೇಶ್ ಕುಮಾರ್

ತಿರುವನಂತಪುರಂ: ಹೊಸದಾಗಿ ನೇಮಕಗೊಂಡ ಸಹಾಯಕ ಮೋಟಾರ್ ವಾಹನ ನಿರೀಕ್ಷಕರನ್ನು (ಎವಿಪಿಐ ಗಳು) ಶಿಸ್ತಿನ ಮತ್ತು ಬಲವಾದ ಪಡೆ ಸದಸ್ಯರನ್ನಾಗಿ ಪರಿವರ್ತಿಸಲು ಸರ್ಕಾರ ಬದ್ಧವಾಗಿದೆ ಎಂದು ಸಾರಿಗೆ ಸಚಿವ ಕೆ. ಬಿ. ಗಣೇಶ್ ಕುಮಾರ್ ಹೇಳಿದ್ದಾರೆ. 

ಹಿಂದಿನ ಮೂರು ತಿಂಗಳ ತರಬೇತಿಗಿಂತ ಭಿನ್ನವಾಗಿ, ಈಗ ಎಂಟು ತಿಂಗಳ ಸಮಗ್ರ ತರಬೇತಿಯನ್ನು ನೀಡಲಾಗುತ್ತದೆ. 

ಐದು ತಿಂಗಳ ಪೋಲೀಸ್ ತರಬೇತಿ ಸೇರಿದಂತೆ, ಇದು ನಿರೀಕ್ಷಕರ ಜೀವನದಲ್ಲಿ ಅತ್ಯಂತ ಶಿಸ್ತಿನ ಮತ್ತು ಉಪಯುಕ್ತವಾಗಿದೆ. ಥೈಕ್ಕಾಡ್ ಪೆÇಲೀಸ್ ತರಬೇತಿ ಕಾಲೇಜು ಸಭಾಂಗಣದಲ್ಲಿ ನಡೆದ ಮೋಟಾರು ವಾಹನ ಇಲಾಖೆಯ ಸಹಾಯಕ ಮೋಟಾರ್ ವಾಹನ ನಿರೀಕ್ಷಕರ ಪಾಸಿಂಗ್ ಔಟ್ ಪೆರೇಡ್‍ನಲ್ಲಿ ಗೌರವ ವಂದನೆ ಸ್ವೀಕರಿಸಿದ ನಂತರ ಸಚಿವರು ಮಾತನಾಡುತ್ತಿದ್ದರು.

ಪೋಲೀಸ್ ಮತ್ತು ಅಗ್ನಿಶಾಮಕ ಪಡೆಗಳಂತೆ, ಮೋಟಾರು ವಾಹನ ಇಲಾಖೆಯೂ ಸಮವಸ್ತ್ರ ಧರಿಸಿದ ಪಡೆ ಮತ್ತು ಸಮವಸ್ತ್ರ ಧರಿಸುವುದು ದೇಶದ ರಕ್ಷಕರಲ್ಲಿ ಒಬ್ಬರಾಗುವಂತಿದೆ.


ಪ್ರತಿಯೊಬ್ಬ ಅಧಿಕಾರಿಯೂ ಮನಸ್ಸು ಮತ್ತು ದೇಹದಲ್ಲಿ ಸದೃಢರಾಗಿರಬೇಕು. ಹೊಸ ಅಧಿಕಾರಿಗಳಿಗೆ ಕೆಎಸ್‍ಆರ್‍ಟಿಸಿ ಕಾರ್ಯಾಗಾರಗಳಲ್ಲಿ 30 ದಿನಗಳ ಕಂಪ್ಯೂಟರ್ ತರಬೇತಿ ಮತ್ತು 10 ರಿಂದ 20 ದಿನಗಳ ಪ್ರಾಯೋಗಿಕ ತರಬೇತಿಯನ್ನು ನೀಡಲಾಗುವುದು ಎಂದು ಸಚಿವರು ಹೇಳಿದರು.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries