ಮಂಜೇಶ್ವರ: ಕೇಂದ್ರ ಸರ್ಕಾರ ಅದ್ಬುತವಾಗಿ ನಿರ್ಮಿಸಿರುವ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಿರ್ವಹಿಸುವ ಕಾಂಟ್ರಾಕ್ಟ್ ಸಂಸ್ಥೆ ಊರಾಲಂಗಲ್ ಸೊಸೈಟಿ ಜಿಲ್ಲೆಯ ಕೆಲವು ಕಡೆ ಇತಿಹಾಸ ಕಾಲದಿಂದ ಜಾರಿಯಲ್ಲಿರುವ ಕೆಲವು ಹೆಸರುಗಳನ್ನು ಬದಲಾಯಿಸುತ್ತಿದೆ ಮತ್ತು ಕೇಂದ್ರ ಸರ್ಕಾರ ಕಾಸರಗೋಡು ಜಿಲ್ಲೆಯಲ್ಲಿ ಕನ್ನಡ ನಾಮಫಲಕ ಸ್ಥಾಪಿಸಲು ಸೂಚನೆ ನೀಡಿದ್ದರೂ ಊರಾಲಂಗಲ್ ಸಂಸ್ಥೆ ಕನ್ನಡ ಬೋರ್ಡ್ ಸ್ಥಾಪಿಸದೆ ಗಡಿನಾಡಿನ ಕನ್ನಡಿಕರನ್ನು ಅವಮಾನಿಸುತಿದೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ. ಆರೋಪಿಸಿದ್ದಾರೆ.
ಮಂಜೇಶ್ವರದ 'ಕನಿಲ' ಎಂಬ ಐತಿಹಾಸಿಕ ಹಾಗೂ ಸಾವಿರ ವರ್ಷಕ್ಕೂ ಮೇಲ್ಪಟ್ಟ ಇತಿಹಾಸವಿರುವ ಸ್ಥಳನಾಮವನ್ನು ಬಸ್ ವೈಟಿಂಗ್ ಶೆಡ್ ಗೆ ಪೊಸೂಟ್ ಎಂಬ ಬೋರ್ಡ್ ಅಳವಡಿಸಿವುದು ಬೇಜವಾಬ್ದಾರಿ ತನ ಎಂದು ಬಿಜೆಪಿ ಆಕ್ರೋಶ ವ್ಯೆಕ್ತಪಡಿಸಿದೆ.
ಗ್ರಾಮ ಕಚೇರಿ ದಾಖಲೆಗಳಲ್ಲಿ ಗ್ರಾಮದ ಹೆಸರು ಕನಿಲ ಎಂದು ಇದೆ. ಚುನಾವಣಾ ಆಯೋಗದ ಪ್ರಕಾರ ವಾರ್ಡ್ ಹೆಸರು ಕನಿಲ ಎಂದೇ ಇದೆ. ಸ್ಥಳನಾಮ ಬದಲಾವಣೆ ಮಾಡಿರುವುದು ಯಾವ ಉದ್ದೇಶದಿಂದ ಎಂದು ಬಿಜೆಪಿ ಊರಾಲಂಗಲ್ ವಿರುದ್ದ ದೂರು ನೀಡಿದೆ.
ಎಲ್ಲಾ ಸೂಚನಾ ಫಲಕಗಳಲ್ಲಿ ಕನ್ನಡ ಬಳಸಬೇಕು ಮತ್ತು ಸ್ಥಳಗಳಿಗೆ ಯಾತರ್ಥ ಹೆಸರನ್ನೇ ಇರಿಸಬೇಕು. ಇಲ್ಲವಾದಲ್ಲಿ ಹೊರಾಟದ ಹಾದಿಯನ್ನು ಬಿಜೆಪಿ ನಿರ್ಧರಿಸಲಿದೆ ಎಮದು ಎಚ್ಚರಿಸಲಾಗಿದೆ.





