HEALTH TIPS

ಮುಂಬೈ, ಕೊಹಿಮಾ, ಭುವನೇಶ್ವರ ಮಹಿಳೆಯರಿಗೆ ಅತ್ಯಂತ ಸುರಕ್ಷಿತ ನಗರಗಳು: ಎನ್‌ಎಆರ್‌ಐ ವರದಿ

ನವದೆಹಲಿ: ಮಹಿಳಾ ಸುರಕ್ಷತೆ ಕುರಿತು ರಾಷ್ಟ್ರೀಯ ವಾರ್ಷಿಕ ವರದಿ ಮತ್ತು ಸೂಚ್ಯಂಕ (ಎನ್‌ಎಆರ್‌ಐ) 2025ರ ಪ್ರಕಾರ ಮುಂಬೈ, ಕೊಹಿಮಾ, ಭುವನೇಶ್ವರ, ವಿಶಾಖಪಟ್ಟಣ, ಐಜ್ವಾಲ್, ಗ್ಯಾಂಗ್ಟಕ್ ಮತ್ತು ಇಟಾನಗರ ದೇಶದಲ್ಲಿ ಮಹಿಳೆಯರ ಪಾಲಿಗೆ ಅತ್ಯಂತ ಸುರಕ್ಷಿತ ನಗರಗಳಾಗಿದ್ದರೆ ಪಾಟ್ನಾ, ಜೈಪುರ, ಫರೀದಾಬಾದ್, ಕೋಲ್ಕತಾ, ದಿಲ್ಲಿ, ಶೀನಗರ ಮತ್ತು ರಾಂಚಿ ಅತ್ಯಂತ ಕೆಳಗಿನ ಸ್ಥಾನಗಳಲ್ಲಿವೆ.

ಗುರುವಾರ ಬಿಡುಗಡೆಗೊಂಡಿರುವ ರಾಷ್ಟ್ರವ್ಯಾಪಿ ಸೂಚ್ಯಂಕವು 31 ನಗರಗಳಾದ್ಯಂತ 12,770 ಮಹಿಳೆಯರ ಸಮೀಕ್ಷೆಯನ್ನು ಆಧರಿಸಿದ್ದು,ರಾಷ್ಟ್ರೀಯ ಸುರಕ್ಷತಾ ದರವನ್ನು ಶೇ.65ರಲ್ಲಿರಿಸಿದೆ. ಈ ಮಾನದಂಡದ ಆಧಾರದಲ್ಲಿ ನಗರಗಳನ್ನು ಮಹಿಳೆಯರ ಸುರಕ್ಷತೆಯ ದೃಷ್ಟಿಯಲ್ಲಿ ವರ್ಗೀಕರಿಸಲಾಗಿದೆ.

ಮುಂಬೈ ಮತ್ತು ಇತರ ಅಗ್ರ ಶ್ರೇಯಾಂಕಿತ ನಗರಗಳು ಬಲವಾದ ಲಿಂಗ ಸಮಾನತೆ, ನಾಗರಿಕ ಭಾಗವಹಿಸುವಿಕೆ, ಪೋಲಿಸ್ ವ್ಯವಸ್ಥೆ ಮತ್ತು ಮಹಿಳಾ-ಸ್ನೇಹಿ ಮೂಲಸೌಕರ್ಯಗಳೊಂದಿಗೆ ಗುರುತಿಸಿಕೊಂಡಿವೆ.

ಪಟ್ಟಿಯ ತಳಭಾಗದಲ್ಲಿರುವ ಪಾಟ್ನಾ ಮತ್ತು ಜೈಪುರದಂತಹ ನಗರಗಳು ದುರ್ಬಲ ಸಾಂಸ್ಥಿಕ ಸ್ಪಂದಿಸುವಿಕೆ, ಪಿತೃಪ್ರಧಾನ ಕಟ್ಟುಪಾಡುಗಳು ಮತ್ತು ನಗರ ಮೂಲಸೌಕರ್ಯಗಳ ಕೊರತೆಯಿಂದಾಗಿ ಮಹಿಳೆಯರ ಪಾಲಿಗೆ ಅತ್ಯಂತ ಅಸುರಕ್ಷಿತ ನಗರಗಳೆಂದು ಗುರುತಿಸಿಕೊಂಡಿವೆ.

ಒಟ್ಟಾರೆಯಾಗಿ ಸಮೀಕ್ಷೆಗೊಳಗಾದ ಪ್ರತಿ ಹತ್ತು ಮಹಿಳೆಯರ ಪೈಕಿ ಆರು ಮಹಿಳೆಯರು ತಮ್ಮ ನಗರವನ್ನು ಸುರಕ್ಷಿತ ಎಂದು ಭಾವಿಸಿದ್ದರೆ, ಶೇ.40ರಷ್ಟು ಮಹಿಳೆಯರು ತಾವು ಅಷ್ಟೊಂದು ಸುರಕ್ಷಿತವಲ್ಲ ಅಥವಾ ಅಸುರಕ್ಷಿತರು ಎಂದು ಈಗಲೂ ಭಾವಿಸಿದ್ದಾರೆ ಎಂದು ವರದಿಯು ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries