ನಾವು ನಮ್ಮ ಮೊಬೈಲ್ ಸಂಖ್ಯೆಯನ್ನು ಬದಲಾದಾಗ, ಅದನ್ನು ನಮ್ಮೆಲ್ಲಾ ಪ್ರಮುಖ ದಾಖಲೆಗಳಲ್ಲೂ ಅಪ್‌ಡೇಟ್ ಮಾಡುವುದು ಅತ್ಯಗತ್ಯ. ಅವುಗಳಲ್ಲಿ, ಆಧಾರ್ ಕಾರ್ಡ್ ಪ್ರಮುಖ ಗುರುತಿನ ಚೀಟಿಯಾಗಿದ್ದು, ಆಧಾರ್ ಸೇವೆಗಳನ್ನು ಪಡೆಯಲು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರುವುದರಿಂದ, ಹೊಸ ಮೊಬೈಲ್ ಸಂಖ್ಯೆಯನ್ನು ಆಧಾರ್‌ನಲ್ಲಿ ನವೀಕರಿಸುವುದು ಮತ್ತಷ್ಟು ಮುಖ್ಯವಾಗುತ್ತದೆ.
ಆಧಾರ್‌ನಲ್ಲಿ ಮೊಬೈಲ್ ಸಂಖ್ಯೆ ಬದಲಾಯಿಸಲು ಆನ್‌ಲೈನ್ ಅಪಾಯಿಂಟ್‌ಮೆಂಟ್ ಬುಕ್ ಮಾಡುವ ಮೂಲಕ ನೀವು ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಬೇಕು. ಈ ಪ್ರಕ್ರಿಯೆ ಹೇಗೆ ಎಂಬುದಕ್ಕೆ ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ. ಬನ್ನಿ, ಹೊಸ ಮೊಬೈಲ್ ಸಂಖ್ಯೆಯನ್ನು ಆಧಾರ್‌ಗೆ ಲಿಂಕ್ ಮಾಡುವುದು ಹೇಗೆ? ಎಂಬುದನ್ನು ತಿಳಿಯೋಣ.
ಮೊದಲು ಮೊಬೈಲ್ ಸಂಖ್ಯೆ ಅಪ್‌ಡೇಟ್‌ಗಾಗಿ ಅಪಾಯಿಂಟ್‌ಮೆಂಟ್ ಬುಕ್ ಮಾಡುವುದು ಹೇಗೆ?
ಶುಲ್ಕ ಮತ್ತು ನಂತರದ ಪ್ರಕ್ರಿಯೆ
ಮೊಬೈಲ್ ಸಂಖ್ಯೆ ನವೀಕರಣ ಪ್ರಕ್ರಿಯೆಗೆ ರೂ. 50 ಶುಲ್ಕ ಪಾವತಿಸಬೇಕಾಗುತ್ತದೆ. ನವೀಕರಣ ಪ್ರಕ್ರಿಯೆ ಪೂರ್ಣಗೊಂಡ ನಂತರ, ನಿಮಗೆ URN (ಅಪ್‌ಡೇಟ್ ವಿನಂತಿ ಸಂಖ್ಯೆ) ಹೊಂದಿರುವ ಸ್ವೀಕೃತಿ ಸ್ಲಿಪ್ ದೊರೆಯುತ್ತದೆ. ಈ URN ಬಳಸಿ ನಿಮ್ಮ ನವೀಕರಣದ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಟ್ರ್ಯಾಕ್ ಮಾಡಬಹುದು.
ಆಧಾರ್, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ನೀಡುವ 12-ಅಂಕಿಯ ಅನನ್ಯ ಸಂಖ್ಯೆಯಾಗಿದೆ. ಇದು ಸರ್ಕಾರಿ ಸೌಲಭ್ಯಗಳು, ಬ್ಯಾಂಕಿಂಗ್, ಪ್ರವೇಶಗಳು, ಚಾಲನಾ ಪರವಾನಗಿ, ಪಾಸ್‌ಪೋರ್ಟ್ ಮತ್ತು ಇತರೆ ಸೇವೆಗಳಿಗೆ ಪ್ರಮುಖ ಗುರುತಿನ ಮತ್ತು ವಿಳಾಸದ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ. ಈ ಕಾರಣದಿಂದಾಗಿ, ಆಧಾರ್‌ನಲ್ಲಿರುವ ಎಲ್ಲಾ ಮಾಹಿತಿಗಳು ನಿಖರವಾಗಿ ಮತ್ತು ನವೀಕೃತವಾಗಿರುವುದು ಬಹಳ ಮುಖ್ಯ. ಹಾಗಾಗಿ, ಹೊಸ ಮೊಬೈಲ್ ಸಂಖ್ಯೆಯನ್ನು ಆಧಾರ್‌ಗೆ ಲಿಂಕ್ ಮಾಡಲು ಈ ಮೇಲಿನ ಹಂತಗಳನ್ನು ಪಾಲಿಸಿ. ಇತರರಿಗೆ ಸಹಾಯ ಮಾಡಲು ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಮತ್ತು ಈ ಮಾಹಿತಿಯಿಂದ ನಿಮಗೆ ಸಹಾಯವಾಗಿದೆ ಎಂದಾದರೆ ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.





