ಕಾಸರಗೋಡು: ಮಂಜೇಶ್ವರ ಕ್ಷೇತ್ರದ ಕನಿಲ ಗ್ರಾಮದ ಸ್ಥಳನಾಮ ಬದಲಾಯಿಸಿ 'ಪೊಸೋಟ್'ಎಂದು ಬಳಸುತ್ತಿರುವುದಕ್ಕೆ ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ಅಶ್ವಿನಿ ಎಂ ಎಲ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸಾವಿರಾರು ಜನರ ಆತ್ಮೀಯತೆಯನ್ನು ಹೊಂದಿರುವ "ಕನಿಲ" ಎಂಬ ಹೆಸರು ಇತಿಹಾಸ, ಸಂಸ್ಕøತಿ ಹಾಗೂ ಜನಜೀವನದ ಭಾಗವಾಗಿದ್ದು, ಸಾರ್ವಜನಿಕರ ಒಪ್ಪಿಗೆ ಇಲ್ಲದೆ ಈ ಬದಲಾವಣೆ ನಡೆಯುತ್ತಿರುವುದು ಖಂಡನೀಯ.
ಹೆಸರಿನ ಬದಲಾವಣೆಯಿಂದ ಸಾರ್ವಜನಿಕರಿಗೆ ಗೊಂದಲ ಉಂಟಾಗಿದ್ದು, ಅಂಚೆ ಸೇವೆ, ಆಡಳಿತಾತ್ಮಕ ದಾಖಲೆಗಳು ಹಾಗೂ ಸ್ಥಳ ಪರಿಚಯದಲ್ಲಿ ಅಡಚಣೆ ಉಂಟಾಗಿದೆ. ಇದು ಸ್ಥಳೀಯರ ಆತ್ಮಗೌರವಕ್ಕೂ ಧಕ್ಕೆ ತಂದಿದೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ತಯಾರಿ ನಡೆಸಿದ್ದು, "ಪೆÇಸೋಟ್" ಎಂಬ ಹೆಸರನ್ನು ಸರ್ಕಾರದ ಯಾವುದೇ ದಾಖಲೆಗಳಲ್ಲಿ ಬಳಸಬಾರದು ಎಂಬ ನಿಲುವು ತೆಗೆದುಕೊಂಡಿದ್ದಾರೆ. ತಕ್ಷಣವೇ ಹೆಸರು ಬದಲಾವಣೆಯ ಕ್ರಮವನ್ನು ನಿಲ್ಲಿಸಬೇಕು ಮತ್ತು ಈ ಹಿಂದೆ ಜಾರಿಯಲ್ಲಿರುವ "ಕನಿಲ" ಹೆಸರನ್ನು ಉಳಿಸಿಕೊಳ್ಳುವಂತೆ ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂಎಲ್ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.





