ಕಾಸರಗೋಡು: ಜಿಲ್ಲಾ ಜೂನಿಯರ್ ತ್ರೋ ಬೋರ್ಡ್ ಚಾಂಪ್ಯನ್‍ಶಿಪ್‍ನಲ್ಲಿ ಎಸ್ ಎಪಿಎಚ್‍ಎಸ್ ಅಗಲ್ಪಾಡಿ ಶಾಲೆ ಬಾಲಕರ ವಿಭಾಗದಲ್ಲೂ ಎಸ್‍ವಿವಿಎಚ್‍ಎಸ್ ಕೊಡ್ಲಮೊಗರು ಶಾಲೆ ಬಾಲಕಿಯರ ವಿಭಾಗದಲ್ಲೂ ಚಾಂಪ್ಯನ್‍ಶೀಪ್ ಪಡೆದುಕೊಂಡಿದ್ದಾರೆ. ವಿಜೇತ ತಂಡಗಳಿಗೆ ಸ್ಪೋಟ್ರ್ಸ್ ಕೌನ್ಸಿಲ್ ಕಾರ್ಯದರ್ಶಿ ಮದನನ್ ಬಹುಮಾನ ವಿತರಿಸಿದರು.
ಕೊಡ್ಲಮೊಗರು ಶಾಲೆಯಲ್ಲಿ ನಡೆದ ಜಿಲ್ಲಾ ಚಾಂಪ್ಯನ್‍ಶಿಪನ್ನು ಮಜೀದ್ ಉದ್ಘಾಟಿಸಿದರು. ಸಂಘಟನೆ ಜಿಲ್ಲಾ ಅಧ್ಯಕ್ಷ ಕೆ. ಸೂರ್ಯನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಸಂತೋಷ್ ಕುಮಾರ್, ಶಶಿಕಾಂತ್ ಜಿ .ಆರ್ ಕೆ ಮೊದಲಾದವರು ಉಪಸ್ಥೀತರಿದ್ದರು. ಮುಖ್ಯ ಶಿಕ್ಷಕಿ ಕೃಷ್ಣವೇಣಿ ಸ್ವಾಗತಿಸಿದರು. ಉದಯಕುಮಾರ್ ವಂದಿಸಿದರು.





