ಕಾಸರಗೋಡು: ಕಡಲ್ಕೊರೆತ ತೀವ್ರಗೊಂಡಿರುವ ಉದುಮ ಪಡಿಂಞõÁರ್ ಜನ್ಮ ಕಡಪ್ಪುರ ವ್ಯಾಪ್ತಿ ಯಾವುದೇ ಸಂದರ್ಭದಲ್ಲಿ ಅಪಾಯಕ್ಕೆ ಸಿಲುಕುವ ಸಾಧ್ಯತೆಯಿದೆ. ಈ ಪ್ರದೇಶದ ರಸ್ತೆ ಈಗಾಗಲೇ ಸಮುದ್ರ ಪಾಲಾಗಿದೆ. ತಡೆಗೋಡೆಯೂ ಸಮುದ್ರ ಪಾಲಾಗಿದ್ದು, ಸುಮಾರು 10 ಮೀಟರ್‍ನಷ್ಟು ಸಮುದ್ರ ನುಂಗಿದೆ. ಯಾವುದೇ ಕ್ಷಣದಲ್ಲೂ ಜೀವಕ್ಕೆ ಹಾನಿ ಸಂಭವಿಸುವ ಆತಂಕ ವ್ಯಕ್ತವಾಗಿದೆ.
ಜನರ ಆತಂಕವನ್ನು ದೂರ ಮಾಡಲು ಅಂಬಿಕಾ ವಾಚನಾಲಯ ಆಟ್ರ್ಸ್ ಆ್ಯಂಡ್ ಸ್ಪೋಟ್ಸ್ ಕ್ಲಬ್, ಗ್ರಂಥಾಲಯದ ಕಾರ್ಯಕರ್ತರು ಸಮುದ್ರ ಕಿನಾರೆಯಲ್ಲಿ ಮರಳು ತುಂಬಿದ ಚೀಲಗಳನ್ನು ಇರಿಸಿ ಕಡಲ್ಕೊರೆತ ತಡೆಗೋಡೆ ನಿರ್ಮಿಸಿದರು. ಸ್ಥಳೀಯ ಮಹಿಳೆಯರು, ಮಕ್ಕಳು ಸಹಿತ ನೂರಾರು ಮಂದಿ ಭಾಗವಹಿಸಿದ್ದರು. ವಾರ್ಡ್ ಸದಸ್ಯೆ ಶಕುಂತಳಾ ಭಾಸ್ಕರನ್, ಪಿ.ಟಿ.ರಜೀಶ್, ಶಿವಪ್ರಸಾದ್ ಸಿ, ಕೆ.ವಿ.ಅಪ್ಪು, ಸಿ.ಕೆ.ವೇಣು, ಕೃಷ್ಣನ್ ಕಡಪ್ಪುರ, ಕೆ.ಸಿ.ಗೋಪಾಲನ್, ಜಯನ್, ಕಡಪ್ಪುರಂ ಕುಮಾರನ್, ಕುಂಞÂಕೃಷ್ಣನ್, ಕಿರಣ್ ಜಿ, ಪ್ರಸಾದ್ ಬಿ, ಪವಿತ್ರನ್, ನಾರಾಯಣನ್, ಪುರುಷೋತ್ತಮನ್, ಸುಜಾತ, ಪ್ರಶಾಂತ್, ಪ್ರಮೋದ್ ಇ, ಪ್ರದೀಪ್ ಬಿ, ಉಣ್ಣಿ ಸಿ.ಕೆ, ಮನೋಜ್ ಎಂ, ಅಜಯನ್, ಕುಟ್ಟಿಕೃಷ್ಣನ್, ದೇವನ್ ಸಿ.ಕೆ.ಮೊದಲಾದವರು ನೇತೃತ್ವ ನೀಡಿದರು.




.jpg)
