ಮಂಜೇಶ್ವರ: ಪಾಲಕ್ಕಾಡ್ ವಿಭಾಗೀಯ ರೈಲ್ವೆ ಅಧಿಕಾರಿ, ಡಿವಿಶನಲ್ ರೈಲ್ವೆ ಮೆನೇಜರ್ ಮಧುಕರ್ ರವತ್ ಹಾಗೂ ಎ.ಡಿ.ಆರ್.ಎಂ. ಜಯಕೃಷ್ಣನ್ ಬುಧವಾರ ಬಿಜೆಪಿ ಜಿಲ್ಲಾ ಸಮಿತಿಯ ಅಗ್ರಹದಂತೆ ಕೇಂದ್ರ ರೈಲ್ವೆ ಸಚಿವರ ಆದೇಶದ ಮೇರೆಗೆ ಮಂಜೇಶ್ವರ ರೈಲ್ವೆ ನಿಲ್ದಾಣ ಪರಿಶೀಲನೆ ಹಾಗೂ ಅಭಿವೃದ್ಧಿ ಬಗ್ಗೆ ಅವಲೋಕನ ನಡೆಸಲು ಆಗಮಿಸಿದ್ದರು. ಈ ಸಂದರ್ಭ ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ, ಹರಿಶ್ಚಂದ್ರ ಮಂಜೇಶ್ವರ ನೇತೃತ್ವದಲ್ಲಿ ಮಂಜೇಶ್ವರದ ರೈಲ್ವೆ ಅಭಿವೃದ್ಧಿ ಬಗ್ಗೆ ಸಮಾಲೋಚನೆ ನಡೆಸಲಾಯಿತು. ಬಿಜೆಪಿ ವತಿಯಿಂದ ವಿವಿಧ ಬೇಡಿಕೆಗಳಿಗೆ ಮನವಿ ನೀಡಲಾಯಿತು.
ಅಗತ್ಯವಾಗಿ ಆಗಬೇಕಾದ ಹೊಸಂಗಡಿ ರೈಲ್ವೆ ಬ್ರಿಡ್ಜ್, ಹೊಸಬೆಟ್ಟು ಕ್ರಾಸ್ಸಿಂಗ್, ರೈಲ್ವೆ ಎನ್.ಎಚ್. ಮುಂಭಾಗ ರೈಲ್ವೆ ವತಿಯಿಂದ ಶಾಪಿಂಗ್ ಕಟ್ಟಡ, ಪಾರ್ಕ್, ಹಾಗೂ ಮಂಜೇಶ್ವರ ರೈಲು ನಿಲ್ದಾಣದಲ್ಲಿ ಸ್ವಯಂಚಾಲಿತ ಲಿಫ್ಟ್ ಸ್ಥಾಪಿಸಲು, ವಿವಿಧ ರೈಲುಗಳ ಮಂಜೇಶ್ವರ ನಿಲುಗಡೆಗೆ ಬೇಡಿಕೆ ನೀಡಲಾಯಿತು. ರೈಲ್ವೆ ಆದರ್ಶ ಅಭಿವೃದ್ಧಿ ಯೋಜನೆಯಲ್ಲಿ ಮಂಜೇಶ್ವರ ರೈಲು ನಿಲ್ದಾಣವನ್ನು ಸೇರಿಸಲು ಮನವಿ ನೀಡಲಾಯಿತು.




.jpg)
