ಕಾಸರಗೋಡು: ಕೇರಳ ರಾಜ್ಯ ಕನ್ನಡ ಭಾಷಾ ಅಲ್ಪಸಂಖ್ಯಾತರ ಸಾಂಸ್ಕøತಿಕ ಮತ್ತು ಸಾಹಿತ್ಯಿಕ ಸಂಘಟನೆ, ಕಾಸರಗೋಡು ಕನ್ನಡ ಗ್ರಾಮದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ 35ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಕಾಸರಗೋಡು ಕನ್ನಡ ಗ್ರಾಮದ ಸ್ಥಾಪಕ ಶಿವರಾಮ ಕಾಸರಗೋಡು ಅವರ 60ನೇ ವರ್ಷದ ಜನ್ಮ ದಿನಾಚರಣೆ, ಅಭಿನಂದನಾ ಸಮಾರಂಭ ನ. 4ರಂದು ಮಧ್ಯಾಹ್ನ 2ರಿಂದ ಕನ್ನಡ ಗ್ರಾಮದಲ್ಲಿ ಜರುಗಲಿದೆ.
ಸಮಾರಂಭವನ್ನು ಕೇರಳ-ಕರ್ನಾಟಕ ಸಾಹಿತ್ಯ, ಸಾಂಸ್ಕೃತಿಕ ಉತ್ಸವವನ್ನಾಗಿ ಆಚರಿಸಲಾಗುವುದು. ಕನ್ನಡ ಗ್ರಾಮದ ಆವರಣದಲ್ಲಿ ಖ್ಯಾತ ಛಾಯಾ ಚಿತ್ರಕಾರದಿಂದ, ಕಲಾವಿದರಿಂದ ಅಪರೂಪದ ಛಾಯಾಚಿತ್ರ ಪ್ರದರ್ಶನ ಆಯೋಜಿಸಲಾಗುವುದು. ಕೇರಳ ಮತ್ತು ಕರ್ನಾಟಕ ರಾಜ್ಯದ ಹಿರಿಯ ಯುವ, ಗಾಯಕ ಗಾಯಕಿಯರಿಂದ ಕನ್ನಡ ಗೀತೆಗಳ ಸಮೂಹ ಗಾಯನ, ಅಂತಾರಾಜ್ಯ ಖ್ಯಾತಿಯ ಗಾಯಕ, ಗಾಯಕಿಯರಿಂದ, ಕಲಾವಿದರಿಂದ ಸಂಗೀತ,ನೃತ್ಯ, ಸುಗಮ ಸಂಗೀತ,ದಾಸ ಸಂಕೀರ್ತನೆ, ಭಕ್ತಿ,ಭಾವ, ಜಾನಪದ, ಚಲನಚಿತ್ರ ಗೀತಾ ಗಾಯನ ಜರುಗಲಿದೆ.
ಅಂದು ಬೆಳಿಗ್ಗೆ ಗಂಟೆ 11.00 ಕ್ಕೆ ಬಹುಭಾಷಾ ಕವಿಗೋಷ್ಠಿ, ಚುಟುಕು ಕವಿಗೋಷ್ಠಿ, ಮಕ್ಕಳ ಕವಿಗೋಷ್ಠಿ,ಕನ್ನಡ ಕವಿ ಗೋಷ್ಠಿ, 'ಕಾಸರಗೋಡು ಕನ್ನಡಿಗ-ಗಡಿನಾಡು-ಹೊರನಾಡು ಕನ್ನಡಿಗ -ಕರ್ನಾಟಕ ಸರಕಾರ' ಕುರಿತು ರಾಷ್ಟ್ರೀಯ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ.
ಗಡಿನಾಡು ಕಾಸರಗೋಡು ಪ್ರದೇಶದ ಕನ್ನಡ ಭಾಷೆ, ಸಾಹಿತ್ಯ, ಶಿಕ್ಷಣ,ಸಂಸ್ಕೃತಿ, ಇತಿಹಾಸವನ್ನು ಸಂರಕ್ಷಿಸಿ ಉಳಿಸಿ ಬೆಳೆಸುವ ಕುರಿತು ವಿವಿಧ ಕ್ಷೇತ್ರಗಳ ಸಂಪನ್ಮೂಲ ವ್ಯಕ್ತಿಗಳು ಹಾಗೂ ಸಾಧಕರೊಂದಿಗೆ ಸಂವಾದ, ಚರ್ಚೆ ನಡೆಸಿ ಕಾಸರಗೋಡು ಕನ್ನಡಿಗರ ಉದ್ಯೋಗ,ಶಿಕ್ಷಣ ಕ್ಷೇತ್ರದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ,ಸಚಿವರು ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ,ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕಾಸರಗೋಡು ಕನ್ನಡಿಗರನ್ನೊಳಗೊಂಡ, ಕನ್ನಡ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳ ಪ್ರಾತಿನಿಧಿಕವಾದ ಉನ್ನತ ಮಟ್ಟದ ನಿಯೋಗವನ್ನು ಕೊಂಡೊಯ್ಯಲು ರೂಪುರೇಷೆ ಸಿದ್ದ ಪಡಿಸಲಾಗುವುದು.
ಕಾಸರಗೋಡು ಕನ್ನಡ ಗ್ರಾಮೋತ್ಸವದಂದು 60ಕ್ಕೂ ಹೆಚ್ಚು ಭಜನಾ ಸಂಕೀರ್ತನಾ ಸಂಘಗಳು, ಮಕ್ಕಳು, ಮಹಿಳಾ ಭಜನಾ ಮಂಡಳಿಗಳು, ಸಂಗೀತ ಕಲಾ ಸಂಘಟನೆಗಳಿಂದ ಭಜನೆ, 60 ಮಂದಿ ಗಾಯಕ, ಗಾಯಕಿರಿಂದ, 'ಸಮೂಹ ಸಂಕೀರ್ತನಾ ದಾಸೋಹ ಗಾಯನೋತ್ಸವ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಲ್ಲದೆ ಮಕ್ಕಳಿಂದ ಕುಣಿತ ಭಜನೆ,ಮಕ್ಕಳಿಂದ ಯಕ್ಷಗಾನ ಪ್ರದರ್ಶನವನ್ನು ಏರ್ಪಡಿಸಲಾಗುದು.





