ಕುಂಬಳೆ: ಕುಂಬಳೆ ಪೇಟೆಯನ್ನು ಕೇಂದ್ರೀಕರಿಸಿ ಸಮಾಂತರ ಲಾಟರಿ ಜೂಜಿನಲ್ಲಿ ನಿರತರಾಗಿದ್ದ ಇಬ್ಬರನ್ನು ಕುಂಬಳೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅನಂತಪುರ ನಿವಾಸಿ ಸತೀಶನ್ ಹಾಗೂ ನಾರಾಯಣಮಂಗಲ ನಿವಾಸಿ ರಾಜೇಶ್ ಬಂಧಿತರು. ಕುಂಬಳೆ ಠಾಣೆ ಇನ್ಸ್‍ಪೆಕ್ಟರ್ ಜಿಜೇಶ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಘಿದ್ದು, ಇವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸಮಾನಾಂತರ ಲಾಟರಿ ದಂಧೆ ಕುಂಬಳೆಯಲ್ಲಿ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.




