ಕಾಸರಗೋಡು: ಕಳೆದ ಎರಡು ದಿವಸಗಳಿಂದ ಜಿಲ್ಲೆಯಲ್ಲಿ ಬಿರುಸಿನ ಮಳೆಯಾಗುತ್ತಿದ್ದು, ಭಾನುವಾರ ಅಲ್ಪ ತಗ್ಗಿದೆ. ಬಿರುಸಿನ ಮಳೆಗೆ ತಗ್ಗು ಪ್ರದೇಶ ನೀರಿನಿಂದವೃತವಾಗಿದ್ದು, ಬೇಕಲ, ಚೆಂಬರಿಕ ಸೇರಿದಂತೆ ನಾನಾ ಕಡೆ ಸಮುದ್ರ ಕೊರೆತ ತೀವ್ರವಾಗಿ ಹೆಚ್ಚಾಗಿದ್ದು, ಹಲವು ಮನೆಗಳು ಈಗಾಗಲೇ ಸಮುದ್ರ ಪಾಲಾಘಿದೆ. ಚೆಂಬರಿಕ ಕಡಪ್ಪುರದಲ್ಲಿ 60ಕ್ಕೂ ಹೆಚ್ಚು ತೆಂಗಿನ ಮರಗಳು ಸಮುದ್ರಪಾಲಾಘಿದ್ದು, ಇಲ್ಲಿನ ಮೂರು ಮನೆಗಳು ಕಡಲಗರ್ಭ ಸೇರಿದ್ದರೆ, ಇನ್ನೂ ಎರಡು ಮನೆಗಳು ಅಪಾಯದಂಚಿನಲ್ಲಿದೆ. ಚೆಂಬರಿಕ ಪ್ರದೇಶದ ಜನತೆ ಸಮುದ್ರದಡದಲ್ಲಿ ಸೂಕ್ತ ತಡೆಗೋಡೆ ನಿರ್ಮಿಸಿ ಮನೆ, ಆಸ್ತಿ ಸಂರಕ್ಷಿಸುವಂತೆ ಒತ್ತಾಯಿಸಿ ಸೆ. 1ರಂದು ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲು ಮುಮದಾಗಿದ್ದಾರೆ.




