ಕಾಸರಗೋಡು: ಆರ್‍ಡಿಒ ಕಚೇರಿಯ ನೂತನ ಕಟ್ಟಡವನ್ನು ಕಂದಾಯ ಮತ್ತು ಸರ್ವೇ ಖಾತೆ ಸಚಿವ ಕೆ. ರಾಜನ್ ಅವರು ಸೆ. 1ರಂದು ಬೆಳಿಗ್ಗೆ 10 ಕಾಸರಗೋಡು ಪಿಲಿಕುಂಜೆಯಲ್ಲಿ ಉದ್ಘಾಟಿಸುವರು. ನಂತರ ನಡೆಯುವ ಜಿಲ್ಲಾ ಮಟ್ಟದ ಪಟ್ಟಾ ಮೇಳದಲ್ಲಿ ಫಲಾನುಭವಿಗಳಿಗೆ ಭೂಮಿಯ ಹಕ್ಕು ಪತ್ರ ವಿತರಿಸುವರು.
ಸರ್ಕಾರದ 'ಅತಿ ಬಡವರಿಲ್ಲದ ಕೇರಳ ಯೋಜನೆ'ಯನ್ವಯ ಕಾಸರಗೋಡು ಜಿಲ್ಲೆಯ ಅತಿ ಬಡ ವರ್ಗಗಳಿಗೆ ಭೂಮಿಯ ಹಕ್ಕುಪತ್ರಗಳನ್ನು ವಿತರಿಸಲಾಗುವುದು. ಜಿಲ್ಲಾಡಳಿತದ ನೇತೃತ್ವದಲ್ಲಿ ಬುಡಕಟ್ಟು ಪ್ರದೇಶದಲ್ಲಿ ಜಾರಿಗೆ ತರಲಾದ ಆಪರೇಷನ್ ಸ್ಮೈಲ್ ಯೋಜನೆ ಅಂಗವಾಗಿ ಬುಡಕಟ್ಟು ಗುಂಪುಗಳಿಗೆ ಭೂಮಿಯ ಹಕ್ಕುಪತ್ರಗಳನ್ನು ಸಚಿವರು ವಿತರಿಸಲಿದ್ದಾರೆ.
ಕಾಸರಗೋಡು ಕಂದಾಯ ವಿಭಾಗೀಯ ಕಚೇರಿಯ ಹೊಸ ಕಟ್ಟಡವನ್ನು ಕೇರಳ ಪುನ:ನಿರ್ಮಾಣ ಯೋಜನೆಯ ಅಂಗವಾಗಿ ನಿರ್ಮಿಸಲಾಗಿದೆ. ರಾಜ್ಯ ಸರ್ಕಾರವು ಎಲ್ಲಾ ಭೂರಹಿತರನ್ನು ಗುರುತಿಸಿ, ಅವರಿಗೆ ಭೂಮಿಯನ್ನು ಒದಗಿಸಿ, ಭೂ ಹಕ್ಕುಪತ್ರಗಳನ್ನು ನೀಡಲಾಗುತ್ತಿದೆ.




