ಕಾಸರಗೋಡು: ಬಿಲ್ಲವ ಸೇವಾ ಸಂಘ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಸಮಾಧಿ ಅಂಗವಾಘಿ ವಿವಿಧ ಕಾರ್ಯಕ್ರಮ ಕರಂದಕ್ಕಾಡಿನ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಜರುಗಿತು. ಕಾರ್ಯಕ್ರಮದ ಅಂಗವಾಗಿ ಸಮೂಹ ಪ್ರಾರ್ಥನೆ ನಡೆಯಿತು. ಬಿಲ್ಲವ ಮುಖಂಡ ರವಿ ಪೂಜಾರಿ ವಿಶೇಷ ಪೂಜೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ರಘು ಕೆ ಮೀಪುಗುರಿ, ಕಾರ್ಯದರ್ಶಿ ಹರಿಕಾಂತ ಸಾಲಿಯನ್, ಸುಕಿರ್ತಿ ವರ್ಮಾ, ಪ್ರೆಮಜಿತ್, ಕಮಲಾಕ್ಷ ಸೂರ್ಲು, ಮೈಂದಪ್ಪ ಪೂಜಾರಿ ಮೊದಲಾದವರು ಭಾಗವಹಿಸಿದ್ದರು.


