ಕಾಸರಗೋಡು: ಪ್ರಧಾನಿ ನರೇಂದ್ರ ಮೋದಿ ಅವರ ಉದಾತ್ತ ಅಭಿವೃದ್ಧಿ ಯೋಜನೆಗಳಿಂದ ದೇಶ ಪುರೋಗತಿಯತ್ತ ಸಾಗುತ್ತಿದ್ದು, ಕೇರಳದಲ್ಲೂ ಇದೇ ರೀತಿಯ ಅಭಿವೃದ್ಧಿಯನ್ನು ರಾಜ್ಯದ ಜನತೆ ಬಯಸುತ್ತಿದ್ದು, ಬಿಜೆಪಿ ಇದಕ್ಕೆ ಸಿದ್ಧತೆ ಮಾಡಿಕೊಂಡಿರುವುದಾಗಿ ಬಿಜೆಪಿ ರಾಜ್ಯ ಕೋಶ ಸಂಯೋಜಕ ಹಾಗೂ ಕಾಸರಗೋಡು ಜಿಲ್ಲಾ ಪ್ರಭಾರಿ ವಕೀಲ ವಿ.ಕೆ. ಸಜೀವನ್ ತಿಳಿಸಿದ್ದಾರೆ.
ಅವರು ಪೊಯಿನಾಚಿ ಸರಸ್ವತಿ ವಿದ್ಯಾಲಯದಲ್ಲಿ ನಡೆದ ಬಿಜೆಪಿ ಉದುಮ ಮಂಡಲ ಸಮಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಬಿಜೆಪಿ 14 ಕೋಟಿ ಸದಸ್ಯರನ್ನು ಹೊಂದಿರುವ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾಗಿದ್ದು, ಕೇಂದ್ರ ಸರ್ಕಾರದೊಂದಿಗೆ 20 ರಾಜ್ಯಗಳನ್ನು ಆಳುತ್ತಿದೆ. ಕೇರಳದಲ್ಲೂ ಬದಲಾವಣೆ ಅನಿವಾರ್ಯ ಎಂದು ಸಜೀವನ್ ಹೇಳಿದರು. ಉದುಮ ಮಂಡಲ ಅಧ್ಯಕ್ಷ ಶೈನಿಮೋಲ್ ಶಶಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್ ಮತ್ತು ಮಾಧ್ಯಮ ಸಂಚಾಲಕ ವೈ. ಕೃಷ್ಣದಾಸ್ ಉಪಸ್ಥಿತರಿದ್ದರು. ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಎ.ಎಂ. ಮುರಳೀಧರನ್ ಸ್ವಾಗತಿಸಿದರು. ಪ್ರದೀಪ್ ಎಂ. ಕೂಟಕಣಿ ವಂದಿಸಿದರು.


