ಕಾಸರಗೋಡು: ನಗರದ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವಕ್ಕೆ ಸೋಮವಾರ ಆರಂಭಗೊಂಡಿತು. ಈ ಸಂದರ್ಭ ಉತ್ಸವ ಪ್ರಾರಂಭದಿಂದ ಮುಕ್ತಾಯದ ತನಕ ಉರಿಯಲಿರುವ ನಂದಾ ದೀಪವನ್ನು ಕ್ಷೇತ್ರ ಮೊಕ್ತೇಸರರಾದ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ ದೀಪ ಪ್ರಜ್ವಲಿಸುವ ಮೂಲಕ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಕಿಶೋರ್ ಅಸ್ರ ಉಳಿಯ, ಶಂಕರ ಅಡಿಗ ಮುಟ್ಟತ್ತೋಡಿ, ಕ್ಷೇತ್ರ ಪ್ರಮುಖರಾದ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ, ಕಿಶೋರ್ ಕುಮಾರ್, ವಕೀಲ ಶ್ರೀಕಾಂತ್, ಸುಜಯ್, ವಸಂತ್ ಕೆರೆಮನೆ, ರಾಮಕೃಷ್ಣ ರಾವ್, ಕಾರ್ತಿಕ್ ರಾವ್, ಬಾಲಕೃಷ್ಣ ಪಡ್ರೆ, ಕೆ.ವಿ.ತಿರುಮಲೇಶ್ ಹೊಳ್ಳ, ಕೆ.ವಿ.ಶೇಷಾದ್ರಿ ಹೊಳ್ಳ ಉಪಸ್ಥಿತರಿದ್ದರು.





